ಚುಟುಕು ಕವಿತೆಗಳು

 ಪ್ರವೀಣ್ ದೇಶಪಾಂಡೆ.

ಚುಟುಕು, ಕವಿತೆಗಳು, tiny poems, short poems

ಮೂಡಿಸಿದ
ಕವಿತೆ ಕೆಳಗೆ
ಬರೆವ ಹೆಸರು,
ಹೆಣದ ಕಡೆಗೆ
ಹಚ್ಚಿಟ್ಟ
ಹಣತೆಯಂತಿರಬೇಕು.
ಬದುಕ ದಿಟವು
ಬೆಳಕ ಬೆರಗು
ಕವಿತೆ ಬರೆದ
ಕವಿಯ ಸಾವು.

***

ಕಸುವು ನೀಡಿ
ಹಿಂಡಿ ಹಾಕಿದ ಬಟ್ಟೆಯಿಂದಲೂ
ನೀರ ಹನಿ ಹನುಕುತ್ತಿತ್ತು.
ಬುಜಬಲದಹಮಿಕೆಯ
ಅಣಕಿಸುವಂತೆ.

***

ಎದೆಯೊಳಗೆ ಆಳ
ಗಾಯಗಳಿದ್ದೂ
ಒಲವ ಕಡಲಿಗಿಳಿದಿದ್ದೇನೆ.
ಹಂಬಲದುಪ್ಪಿನ
ಮಲಾಮು ಸವರಿಕೊಳ್ಳಲು.

***

ಮನಸು ಮೂಲ್ಯಾಗ ಕುಂತು
ಸೊಳ್ಳಿ ಬತ್ತಿ ಹಂಗ್
ಸಣ್ಯಾಗಿ ಉರಿಯಾಕತ್ತತಿ.
ನಿನ್ನ ನೆನಪು ಮುತ್ತಿ
ಕಡಿಯೂ ಪರಿಗೆ.

***

ಜ್ನಾನವೀಗ ಹ್ಯಾಂಡ್ ವಾಶು,
ಉಣ್ಣುವ ಮುಂಚೆ
ಕೈಕೊಳೆಯ ತೊಳೆದ
ಸುವಾಸನೆಯಶ್ಟೆ.
ಅಜೀರ‍್ಣದ ತೇಗು
ಅಜ್ನಾನದ್ದೇ.

(ಚಿತ್ರ ಸೆಲೆ: unsplash.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: