“ನಿಲ್ಲಿ ಮೋಡಗಳೇ, ಎಲ್ಲಿ ಓಡುವಿರಿ?”

ಮಾರಿಸನ್ ಮನೋಹರ್.

ಮಳೆ, ಮೋಡ, ಕರಿಮೋಡ, rain, water, clouds

ದೂರದಲ್ಲಿ ಎಲ್ಲೋ ಮಳೆಯಾಗುತ್ತಿದೆ
ಹಸಿಮಣ್ಣಿನ ಕಂಪು ಓಲೆಕಾರನಾಗಿ
ಎಲ್ಲೆಡೆ ಮಳೆಯ ಸುದ್ದಿಯ ಹರಡಿ
ಆಹಾ! ಈ ಕರಿಮೋಡಗಳು ಕುರಿಗಳು
ಹಾ! ಕುರಿಮಂದೆಯ ಹಾಗೆ ಬರುತ್ತಿವೆ

ಬೆಂಕಿಯ ಒಂದು ಕಿಡಿ ಕಾಡನ್ನು ಹೊತ್ತಿಸಿ
ಮಳೆಯ ಒಂದು ಹನಿ ಆಸೆಗಳ ಹೊತ್ತಿಸಿ
ಉಹೂಂ! ನೀರು ನಂದಿಸುತ್ತದೆಯೇ? ಇಲ್ಲ
ಒಂದು ಹನಿ ಬಿದ್ದು ಮೈಮನಗಳ ಉರಿಸಿದೆ

ಮಳೆ ಬಿದ್ದು ಮಣ್ಣನ್ನು ಮಾತ್ರ ತೋಯಿಸಲಿಲ್ಲ
ಮಳೆ ಬೀಳುತ್ತಿದೆ, ದಡ್ಡ ಮಂದಿ ಒಳಗೋಡಿದರು
ನಾನು ಹೊರಗೋಡಿದೆ, ಮಳೆಗೆ ಮುತ್ತಿಡಲು
ನಾನೊಂದಿಟ್ಟರೆ ಮಳೆ ಸಾವಿರ ಮುತ್ತಿಟ್ಟಿತು

ಮಳೆಯೆಂದರೇನು? ಗುಡುಗೆಂದರೇನು?
ಮಳೆ ಕೇವಲ ನೀರೇ? ಗುಡುಗು ಕೇವಲ ಸದ್ದೇ?
ಮಂದಿಗೂ ಮಳೆಗೂ ರಸಕೇಳಿ ಸೋಬಾನವಿದು
ಮಳೆನಿಂತ ಒಡನೆ ಅಗಲಿಕೆ ಜ್ವರವೇರುವುದು

“ನಿಲ್ಲಿ ಮೋಡಗಳೇ, ಎಲ್ಲಿ ಓಡುವಿರಿ?”
“ನಾವೆಲ್ಲಿ ಹೋಗುವೆವು? ಮತ್ತೆ ಬರುವೆವು”.
“ಹಿತವಾಗಿ ತಂಗಾಳಿ ನನ್ನ ಗಲ್ಲಗಳನ್ನು ಸವರಿ
ಕಣ್ಣು ಮುಚ್ಚಿಕೊಂಡಾಗ ಹ್ರುದಯವನ್ನು ತುಂಬಿ”

(ಚಿತ್ರ ಸೆಲೆ: publicdomainpictures.net)

ಇವುಗಳನ್ನೂ ನೋಡಿ

1 ಅನಿಸಿಕೆ

  1. ರವಿಚಂದ್ರ ಹರ್ತಿಕೋಟೆ says:

    “ನಾನು ಹೊರಗೋಡಿದೆ, ಮಳೆಗೆ ಮುತ್ತಿಡಲು
    ನಾನೊಂದಿಟ್ಟರೆ ಮಳೆ ಸಾವಿರ ಮುತ್ತಿಟ್ಟಿತು”

    ಈ ಸಾಲುಗಳು ತುಂಬಾ ಇಶ್ಟ ಆಯ್ತು. ಒಟ್ಟಾರೆ ಕವನ ತುಂಬಾ ಚೆನಾಗಿದೆ.‌

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: