ಬಾಲ ಕಾರ‍್ಮಿಕರ ಬದುಕು

ಹುಟ್ಟುತ್ತಲೇ ಕಂಡ ಕಡು ಬಡತನ
ಅಸಹಾಯಕತೆಯೇ ಬಂಡವಾಳ ಮಾಡಿಕೊಂಡ ಸಿರಿತನ
ಬಡ ಮಕ್ಕಳ ಮೇಲೆ ದೌರ‍್ಜನ್ಯ
ಸೌಜನ್ಯ ಮರೆತ ಕುರುಡು ಕಾಂಚಾಣ
ಕೇವಲ ಆಚರಣೆಗೆ ಮಾಡುವರು ಅಂತರಾಶ್ಟ್ರೀಯ ಬಾಲ ಕಾರ‍್ಮಿಕ ವಿರೋದಿ ದಿನ

ಹೊಟ್ಟೆ ಪಾಡಿಗಾಗಿ, ತುತ್ತು ಕೂಳಿಗಾಗಿ ದುಡಿತ
ನೊಂದ ಮಕ್ಕಳ ಶಾಪದಿಂದ ಅವನತಿ ಕಚಿತ
ಬಾಲ್ಯ ಕಳೆದುಕೊಂಡ ಮಕ್ಕಳು ಶಿಕ್ಶಣ ವಂಚಿತ
ಅಂತರಾಶ್ಟ್ರೀಯ ಬಾಲ ಕಾರ‍್ಮಿಕ ವಿರೋದಿ ದಿನ ಮಾಡುವ ಜನ ಸುಶಿಕ್ಶಿತ

ಆಟವಾಡುವ ವಯಸ್ಸಿನಲ್ಲಿ ಕೂಲಿ ಮಾಡುವ ಹಣೆಬರಹ
ಕಲಿತು – ನಲಿಯಬೇಕೆಂಬ ಆಸೆ ಓದು ಬರಹ
ಬಡ ಮಕ್ಕಳ ಕಣ್ಣಿಗೆ ಈ ಸಮಾಜ ಒಂದು ಚಕ್ರವ್ಯೂಹ
ಅಂತರಾಶ್ಟ್ರೀಯ ಬಾಲ ಕಾರ‍್ಮಿಕ ವಿರೋದಿ ದಿನ ತಪ್ಪದೇ ಆಚರಿಸುವರು ನಿಸ್ಸಂದೇಹ

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: