ಮಕ್ಕಳ ಕವಿತೆ: ಗಿಳಿರಾಮ

– ಪದ್ಮನಾಬ.

parrot, baby, ಮುದ್ದು ಗಿಳಿಮರಿ

ಬೆಳ್ಮುಗಿಲ ನಾಡಿಂದ ಮುದ್ದಾದ ಗಿಳಿಯೊಂದು
ಅಂಗೈಯ ಮ್ಯಾಲೇ ಇಳಿದಿತ್ತಾ
ಮುದ್ದಾದ ಮಾತಿಂದ ಹಿತವಾದ ನಗುವಿಂದ
ನೋಡೋರ ಮನಸಾ ಸೆಳೆದಿತ್ತಾ

ಒಂಬತ್ತು ಬಾಗಿಲ ಪಂಜರದಿ
ಒಂಬತ್ತು ತಿಂಗಳು ಬಂದಿಯಾಗಿತ್ತಾ
ಆಡುತ್ತ ಹಾಡುತ್ತ ನಲಿಯುತ ನಲಿಸುತ್ತ
ಕಣ್ಮಣಿಯಾಗಿ ಬೆಳೆದಿತ್ತಾ

ಬಣ್ಣಬಣ್ಣದ ಕನಸು ಮನದಲ್ಲಿ ಮೂಡ್ಯಾವೆ
ಜಗದಗಲ ಮುಗಿಲಗಲ ಹಾರುವೆನಾ

ಹಾರುವ ಆಸೆಯು ಹಕ್ಕಿಗೆ ಸಹಜವು
ರೆಕ್ಕೆಗಳು ಬಲಿತಾಗ ಗಿಳಿರಾಮ
ಗಿಡುಗನ ಬಯವಿದೆ ಬೇಡನ ಬಯವಿದೆ
ಹಾರುವ ಹಾದೀಲಿ ಗಿಳಿರಾಮ

ಕಾಳಿಗೆ ಮನಸೋತು ಬಲೆಗೆ ಬೀಳಬೇಡ
ಗಿಡುಗನ ನೆರಳಲಿ ನೀನಾಡಬೇಡ
ನಿನ್ನವರ ಸಂಗ ತೊರಿಬೇಡ ಗಿಳಿರಾಮ
ಹೆತ್ತೊಡಲ ನೀ ನೋಯಿಸಬೇಡ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. padmanabha d says:

    ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು

ಅನಿಸಿಕೆ ಬರೆಯಿರಿ:

%d bloggers like this: