ಸೌತೆಕಾಯಿ ‘ಕರಿಂಡಿ’

– ಸವಿತಾ.

ಕರಿಂಡಿ Karindi

ಬೇಕಾಗುವ ಪದಾರ‍್ತಗಳು

10 ರಿಂದ 12 ಹಸಿಮೆಣಸಿನಕಾಯಿ
3 ಚಮಚ ನೆನೆಸಿದ ಕಡಲೆಕಾಳು
4 ಚಮಚ ಕತ್ತರಿಸಿದ ಸೌತೆಕಾಯಿ ಹೋಳುಗಳು
2 ಚಮಚ ಅಗಸೆ ಬೀಜ
2 ಚಮಚ ಸಾಸಿವೆ
1 ಚಮಚ ಜೀರಿಗೆ
2 ಗೆಡ್ಡೆ ಬೆಳ್ಳುಳ್ಳಿ
ಸ್ವಲ್ಪ ಉಪ್ಪು ಮತ್ತು ಅರಿಶಿಣ

ಮಾಡುವ ಬಗೆ

ಮೊದಲಿಗೆ ಕಡಲೆಕಾಳನ್ನು ನಾಲ್ಕು ಗಂಟೆ ಕಾಲ ನೀರಿನಲ್ಲಿ ನೆನೆಸಿಟ್ಟುಕೊಳ್ಳಿ.

ಒಂದು ಬಾಣಲೆಯಲ್ಲಿ ಅಗಸೆ ಬೀಜ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಸಾಸಿವೆಯನ್ನು ಹುರಿದುಕೊಂಡು ತೆಗೆದಿಡಿ. ಕೊನೆಗೆ ಜೀರಿಗೆ ಹುರಿದು ತೆಗೆದಿಟ್ಟುಕೊಳ್ಳಿ. ಬಳಿಕ ಎಲ್ಲಾ ಸೇರಿಸಿ ಮಿಕ್ಸರ್ ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ.

ಸೌತೆಕಾಯಿಯನ್ನು ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿ ಹಾಗೂ ಹಸಿಮೆಣಸಿನಕಾಯಿಯನ್ನು ಕತ್ತರಿಸಿ ಒಂದು ಅಗಲವಾದ ಬಟ್ಟಲಿನಲ್ಲಿ ಎಲ್ಲಾ ಹಾಕಿ. ಇದಕ್ಕೆ ಹುರಿದು ಪುಡಿಮಾಡಿಟ್ಟುಕೊಂಡಿದ್ದ ಅಗಸೆಬೀಜ, ಸಾಸಿವೆ ಹಾಗೂ ಜೀರಿಗೆಯ ಪುಡಿ, ನೆನೆಸಿಟ್ಟುಕೊಂಡಿದ್ದ ಕಡಲೆಕಾಳು, ಸಿಪ್ಪೆ ಬಿಡಿಸಿರುವ ಬೆಳ್ಳುಳ್ಳಿ, ಸ್ವಲ್ಪ ಉಪ್ಪು ಮತ್ತು ಅರಿಶಿಣ ಸೇರಿಸಿ ಚೆನ್ನಾಗಿ ಕಲಸಿ.

ಹೀಗೆ ಕಲಸಿದ ಮಿಶ್ರಣವನ್ನು ಮೂರು ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಿ ಬಳಿಕ ಗಾಜಿನ ಡಬ್ಬದಲ್ಲಿ ಹಾಕಿಟ್ಟರೆ ಕರಿಂಡಿ ಸವಿಯಲು ಸಿದ್ದ. ಇದನ್ನು ರೊಟ್ಟಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.

(ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: