ಚೌತಿಯ ದಿವಸ ಗಣಪತಿ ಬಂದ

– ವೆಂಕಟೇಶ ಚಾಗಿ.

Ganapa, Lord Ganesha, ಗಣಪ, ಗಣೇಶ, ಮಕ್ಕಳ ಕವಿತೆ. Children's poem

ಚೌತಿಯ ದಿವಸ ಗಣಪತಿ ಬಂದ
ಸುಂದರವಾದ ನಮ್ಮನೆಗೆ
ಅಂದ ಚಂದದಿ ಅಲಂಕರಿಸಿದ
ಮಂಟಪವು ಮೀಸಲಿತ್ತು ಗಣಪನಿಗೆ

ತಾಜಾ ತಾಜಾ ಹಣ್ಣು ಹಂಪಲು
ಕಾಯಿ ಕಡುಬು ಗಣಪನಿಗೆ
ಮಲ್ಲಿಗೆ ಸಂಪಿಗೆ ಕೇದಿಗೆ ಗರಿಕೆ
ಮುಡಿಸಿದೆ ನಾನೇ ಲಂಬೋದರನಿಗೆ

ಬಣ್ಣ ಬಣ್ಣದ ಮಿನುಗುವ ಬೆಳಕು
ಅಂದದ ಗಣಪತಿ ಮಂಟಪದಿ
ತಳಿರು ತೋರಣ ಬಾಳೆಯ ದಿಂಡು
ಮೆಚ್ಚಿನ ಗಣಪತಿಯ ಸ್ವಾಗತಕೆ

ವಿದ-ವಿದ ಪಟಾಕಿ ಅಪ್ಪ ತಂದನು
ಪಟಪಟ ಸದ್ದು ಕಿವಿ ಮೇಲೆ
ಆಕಾಶದಲ್ಲಿನ ಚೆಲುವಿನ ಚಿತ್ತಾರ
ನೋಡಲು ಸೊಗಸು ಮನೆ ಮೇಲೆ

ಗಣಪ ಗಣಪ ಸೊಂಡಿಲು ಗಣಪ
ಬಕ್ತಿಯಿಂದಲಿ ಕರವ ನಾ ಮುಗಿವೆ
ವಿದ್ಯಾ ಬುದ್ದಿಯ ಅದಿಪತಿ ನೀನು
ನಮ್ಮನು ಪಾಲಿಸಿ ಹರಸು ಎಂದೆನುವೆ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications