ಹನಿಗವನಗಳು

– ಬರತ್ ರಾಜ್. ಕೆ. ಪೆರ‍್ಡೂರು.

*** ಆಸರೆ ***

ಬಿರುಗಾಳಿ ಮಳೆಗೆ ತತ್ತರಿಸಿದ ಜೀವ
ತಪ್ಪಿಸಿಕೊಂಡು ಗುಡಿಸಲಿನಾಸರೆ ಪಡೆದಾಗ
ಚಾವಣಿ ಕುಸಿದು ತಲೆಮೇಲೆ ಬಿದ್ದಂತೆ
ನಿನ್ನ ಪ್ರೇಮ

*** ಹದ್ದು ***

ದಟ್ಟ‌ ಕಾನನದ ಬೆಟ್ಟದ ತುದಿಯಲ್ಲಿ
ಎತ್ತರೆತ್ತರಕ್ಕೆ ಹಾರಿ
ಹಸಿರ ಸಿರಿ ಸವಿಯುವ
ಹದ್ದು ನಾನು
ನಾ ದಣಿದಾಗ ವಿಶ್ರಮಿಸುವ
ಬೋಳು ಮರವಾಗಬೇಡ ನೀನು

*** ಪ್ರೀತಿ ಸಾಲ ***

ತುಂತುರು ಮಳೆಯಂತ
ನಿನ್ನ ಪ್ರೀತಿಗೆ ಹದವಾಗಿದೆ ಮೈಮನ
ಅತಂತ್ರವಾದ ಸ್ವತಂತ್ರ
ಬದುಕಿಗೇಕೆ ನಿನ್ನ ಕನ್ನ,
ಮಾಡಿಬಿಡು ನನ್ನದೆಯ ರಾಣಿ
ಇಶ್ಟು ದಿನದ ಬರಡು ಬದುಕಿನ
ಪ್ರೀತಿ ಸಾಲಮನ್ನ

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications