ಒಂದು ಮಾತು ಕಡ್ಡಿ ಗೀರಿಯೇ ಬಿಟ್ಟಿತು…

– ವಿನು ರವಿ.

ಒಂದು ಮಾತು
ಕಡ್ಡಿ ಗೀರಿಯೇ ಬಿಟ್ಟಿತು
ದೂಪ ಹಚ್ಚಲಿಲ್ಲ
ದೀಪ ಬೆಳಗಲಿಲ್ಲ
ಕಿಚ್ಚೆಬ್ಬಿಸಿತು

ವಾದ ವಿವಾದದ ಶಾಕ
ಹಬೆಯಾಡಲು
ಕುದಿಯತೊಡಗಿತು
ಒಲೆ ಹತ್ತಿ ಉರಿದೊಡೆ
ನಿಲಬಹುದು
ದರೆ ಹತ್ತಿ ಉರಿದೊಡೆ

ಹಗುರಾಗುವ ದಾರಿ
ಕಾಣದೆ
ಕಂಗಾಲಾದ ಪುಟ್ಟ
ಹ್ರುದಯಗಳ ಕಂಡು
ಮರುಕದ ಕಣ್ಣೀರು
ತಂಪಾಗುವ ತಹತಹಿಕೆ

ಬೇಗೆಯಿಂದ ಕೆರಳಿದ
ಮನಸುಗಳು ಮ್ರುದುವಾಗಲು
ನೇವರಿಕೆಯ ಕಂಗಳಲಿ
ಕರುಣೆಯ ದೀಪ
ಬೆಳಗತೊಡಗಿತು

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. K.V Shashidhara says:

    ಸೊಗಸಾದ ಕವನದ ಸಾಲುಗಳು ಬಹಳ ಅರ್ಥವತ್ತಾಗಿದೆ

  2. Prathima T says:

    ಬಹಳ ಒಳ್ಳೆಯ ಸಾಲುಗಳು

ಅನಿಸಿಕೆ ಬರೆಯಿರಿ: