ಸಿಹಿ ಪ್ರಿಯರಿಗೆ ಡಾಣಿ ಉಂಡಿ(ಡೆ)

– ಸವಿತಾ.

ಡಾಣಿ ಉಂಡೆ, ಡಾಣಿ ಉಂಡಿ, DaaNi unDi

ಏನೇನು ಬೇಕು?

  • 2 ಬಟ್ಟಲು ಡಾಣಿ
  • 1 ಬಟ್ಟಲು ಬೆಲ್ಲ
  • 2 ಏಲಕ್ಕಿ
  • 1 ಚಮಚ ಗಸಗಸೆ
  • 4 ಚಮಚ ಹುರಿಗಡಲೆ ಪುಡಿ

ಮಾಡುವ ಬಗೆ

  • ಕಡಲೆ ಹಿಟ್ಟು, ಸ್ವಲ್ಪ ಉಪ್ಪು, ಸ್ವಲ್ಪ ಅಡುಗೆ ಸೋಡಾ ಮತ್ತು  ಸ್ವಲ್ಪ ನೀರು ಬೆರೆಸಿ ಬೋಂಡಾ ಹಿಟ್ಟಿಗಿಂತ ಸ್ವಲ್ಪ ಗಟ್ಟಿ ಇರುವಂತ ನಾದಿಕೊಳ್ಳಿ.
  • ಚಕ್ಕುಲಿ ಒರಳಿಗೆ ಹಾಕಿ ತಿರುಗಿಸಿ, ಕಾದ ಎಣ್ಣೆಯಲ್ಲಿ ಬಿಟ್ಟು ಕರಿದು ತೆಗೆಯಿರಿ. ಈಗ ಡಾಣಿ ತಯಾರು. ಈ ಸಪ್ಪೆ ಡಾಣಿ ಒಂದು ಕಡೆ ಇಟ್ಟುಕೊಳ್ಳಿ.
  • ಬೆಲ್ಲ ಮತ್ತು ಕಾಲು ಬಟ್ಟಲು ನೀರು ಸೇರಿಸಿ ಏರು ಪಾಕ ಮಾಡಿ
  • ಡಾಣಿ, ಹುರಿಗಡಲೆ ಪುಡಿ, ಏಲಕ್ಕಿ ಪುಡಿ, ಗಸಗಸೆ ಸೇರಿಸಿ ಒಂದೊಂದೇ ಉಂಡಿಯಾಗಿ ಕಟ್ಟಿ.

ರುಚಿಯಾದ ಡಾಣಿ ಉಂಡಿ ಸವಿಯಿರಿ 🙂

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: