ಮೊಸರು ಕೋಡುಬಳೆ

– ಬವಾನಿ ದೇಸಾಯಿ.

ಮೊಸರು ಕೋಡುಬಳೆ Mosaru Kodubale

ಬೇಕಾಗುವ ಸಾಮಾನು:

– 1 ಕಪ್ ಅಕ್ಕಿಹಿಟ್ಟು.
– 1/2 ಕಪ್ ಮೊಸರು.
– ಒಂದು ಚಮಚ ಜೀರಿಗೆ.
– ಒಂದು ಚಮಚ ಕರಿಮೆಣಸಿನ ಪುಡಿ.
– ಎಣ್ಣೆ, ಕರಿಯಲು.
– ಉಪ್ಪು, ರುಚಿಗೆ ತಕ್ಕಂತೆ.
– ಕರಿಬೇವಿನ ಸೊಪ್ಪು ಸ್ವಲ್ಪ.
– ಕೊತ್ತಂಬರಿ ಸೊಪ್ಪು ಸ್ವಲ್ಪ.

ಮಾಡುವ ಬಗೆ:

ಅರ‍್ದ ಕಪ್ ಮೊಸರಿಗೆ, ಅರ‍್ದ ಕಪ್ ನೀರು ಸೇರಿಸಿ ಮಜ್ಜಿಗೆ ಮಾಡಿ. ಈಗ ಒಲೆಯ ಮೇಲೆ ಒಂದು ಬಾಣಲೆ ಇಟ್ಟು, ಸ್ವಲ್ಪ ಎಣ್ಣೆ, ಜೀರಿಗೆ, ಮೆಣಸಿನ ಪುಡಿ, ಕರಿಬೇವು, ಕೊತ್ತಂಬರಿ ಸೊಪ್ಪು, ಮಜ್ಜಿಗೆಯನ್ನು ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಿ.

ಮಜ್ಜಿಗೆ ಸ್ವಲ್ಪ ಬಿಸಿ ಆಗ್ತಿದ್ದಂತೆ, ಅಕ್ಕಿಹಿಟ್ಟು ಮತ್ತು ಉಪ್ಪು ಹಾಕಿ ಕಲಿಸಿ, ಹಿಟ್ಟನ್ನು ಬೇಯಲು ಬಿಡಿ (ಸುಮಾರು ಒಂದು ನಿಮಿಶ).

ಸ್ವಲ್ಪ ಆರಿದ ಮೇಲೆ, ಈ ಹಿಟ್ಟನ್ನು ಚೆನ್ನಾಗಿ ನಾದಿಕೊಂಡು, ಬಳೆಯ ಆಕಾರ ಮಾಡಿ, ಎಣ್ಣಿಯಲ್ಲಿ ಕರಿದರೆ, ಮೊಸರು ಕೋಡುಬಳೆ ಸವಿಯಲು ಸಿದ್ದ.

(ಚಿತ್ರ ಸೆಲೆ: ಬವಾನಿ ದೇಸಾಯಿ.)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: