ಕಾಡು ಉಳಿದರೆ ನಾಡು

– ವೆಂಕಟೇಶ ಚಾಗಿ.

ದರೆಯಾಳುವ ದೊರೆ ಮನುಜ
ನಿನಗಿದೋ ಒಂದು ವಿನಂತಿ
ಅಳಿಸದಿರು ಈ ಸ್ರುಶ್ಟಿ ಸೊಬಗ
ಬಿಡು ನೀ ದೊರೆ ಎನ್ನುವ ಬ್ರಾಂತಿ

ವಿಗ್ನಾನ ಅಗ್ನಾನ ಸುಗ್ನಾನ ನಿನ್ನಿಂದ
ಮಾತಿನಲ್ಲೇ ಮನೆಕಟ್ಟಿ ಮರೆತೆ ಏಕೆ
ಕೊಟ್ಯಾನು ಕೋಟಿ ಜೀವಿಗಳ ಮನೆಯು ಈ ದರೆ
ಹಾಳುಮಾಡಿ ಬಿಡುವಂತ ಮನಸೇಕೆ

ಬೆಟ್ಟಗಳ ಸಮಮಾಡಿ ನದಿಗಳ ಅಡ್ಡಕಟ್ಟಿ
ಹಸಿರೆಲ್ಲ ಕೆಸರಾಯ್ತು ನಮ್ಮ ರಾಜ್ಯ
ಮೂಕ ಪ್ರಾಣಿಯ ಅಳಲು ಕೇಳಿಸೀತೆ ನಿನಗೆ?
ಬದುಕಲು ಬೇರೆ ಇಲ್ಲ ಹೊಸ ರಾಜ್ಯ

ಮಳೆ ಇಲ್ದೆ, ಬೆಳೆ ಇಲ್ದೆ ಒಡಲಾಳವು ಬತ್ತಿ
ಕೆರೆ ಕಟ್ಟೆ ಅಳಿಯುತಿವೆ ಜಲವಿರದೆ
ಕಾಡೆಲ್ಲ ಬರಡಾಗಿ ಮಳೆ-ಬೆಳೆ ಮರೆಯಾಗಿ
ಮೋಡಗಳೆ ಓಡುತಿವೆ ನೆಲೆ ಇರದೆ

ಅಬಿವ್ರುದ್ದಿ ಹೆಸರಿನಲಿ ಕಾಡನ್ನು ಕಡಿಯದಿರು
ಕಾಡು ಉಳಿದರೆ ನಾಡು ಮರೆಯಬೇಡ
ಬದುಕಲು ನೀ ಕಲಿತು ಬದುಕಿಸು ಈ ಜಗವ
ಕಾಪಾಡು ಈ ದರೆಯ ಮುಂದೆ ನಿಂತು

( ಚಿತ್ರ ಸೆಲೆ : goldtelegraph.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: