ಕವಿತೆ: ಬೆಡಗಿನ ಕೀಲ

– ಚಂದ್ರಗೌಡ ಕುಲಕರ‍್ಣಿ.

ಹೊತ್ತು, ಕಾಲ, Time

ಸೆಕೆಂಡು ನಿಮಿಶ ಗಳಿಗೆ ತಾಸಲಿ
ಅಡಗಿ ಕುಳಿತ ನೆಂಟ
ದಿವಸ ವಾರ ಪಕ್ಶ ಮಾಸದಿ
ಎಡವುತ ಎಡವುತ ಹೊಂಟ

ಮಳಿ ಚಳಿ ಬೇಸಿಗೆ ವರುಶದ ಹಾದಿಯ
ಸವೆಸುತ ನಡೆಯುವ ಮಲ್ಲ
ನೂರು ಸಾವಿರ ಲಕ್ಶ ಕೋಟಿಯ
ಕಲ್ಪನೆ ಮೀರುವನಲ್ಲ

ಮನುಜ ಪ್ರಾಣಿ ಕ್ರಿಮಿಕೀಟಗಳ
ಒಡಲಲಿ ಅವಿತು ಕೂತು
ಹೊಳೆಯದಡದ ಸೂಸು ಮರಳಿನ
ಪರಮಾಣುವಿನಲಿ ಬೆರೆತು

ಆದಿಯೂ ಇಲ್ಲ ಅಂತ್ಯವೂ ಇಲ್ಲ
ಎಂದೂ ಮುಗಿಯದ ಜಾಲ
ಹಗಲು ರಾತ್ರಿ ಜೀವ ಅಜೀವಕೆ
ಜಡಿದು ಬೆಡಗಿನ ಕೀಲ

( ಚಿತ್ರ ಸೆಲೆ: youtube )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks