ತುತ್ತಿನ ಚೀಲವ ತುಂಬಿಕೊಂಡು

– ಅಶೋಕ.ಪ ಹೊನಕೇರಿ.

ತಾಯಿ ಮತ್ತು ಮಗು

ತುತ್ತಿನ ಚೀಲವ ತುಂಬಿಕೊಂಡು
ಹೊತ್ತಾರೆ ಎದ್ದು
ಉಲಿಯುವ ಕಂದನ ಹೆಜ್ಜೆಗೆ
ಪ್ರತಿ ಹೆಜ್ಜೆಯಾಗಿ ನಡೆಯವ
ನಿತ್ಯದ ಬದುಕಿನ ತೊಳಲಾಟಕೆ
ಹೊತ್ತು ಕಂತುವವರೆಗೂ
ಮೈಮುರಿತದ ದುಡಿಮೆಯ
ಬೆಲೆ ತೆತ್ತು. ನಾಳಿನ ಚಿಂತೆಗಳಿಗೆ
ಕಂತೆ ಕಟ್ಟಿ… ಮೊಗದಲಿ
ಮುಗುಳ್ನಗೆಯ ಬಂಡಾರವನೇ
ಹೊತ್ತು .‌.. ಮಲ್ಲಾರದಲಿ
ರವಿಯನೆ ಹೊತ್ತ ಸಂಬ್ರಮದಲಿ
ತಿರುಗಿ ಕಂದನ ಹೆಜ್ಜೆಗೆ ಮರು
ಸಾಕ್ಶಿಯಾಗಿ ಹೆಜ್ಜೆಯ ಮೇಲೆ
ಹೆಜ್ಜೆಯನಿಟ್ಟು ಮನೆಗೆ
ಹಿಂತಿರುಗುವ ನೀರೆ‌‌‌‌…
ಮತ್ತದೇ ನಾಳಿನ ಆಶಯಗಳಿಗೆ
ಆಶಾಬಾವನೆಯಿಟ್ಟು..‌‌
ಬದುಕಿಗೊಂದು ಅರ‍್ತ
ಹೇಳುತಿದ್ದಾಳೆ
ನಮ್ಮಂತಹ ಮೂಡ ಮತಿಗಳಿಗೆ
ನಮ್ಮಂತಹ ಮೂಡ ಮತಿಗಳಿಗೆ

(ಚಿತ್ರ ಸೆಲೆ: pixabay )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: