ಹರುಶ ತರಲಿ ಹೊಸ ವರುಶ

 ಕಾವೇರಿ ಸ್ತಾವರಮಟ.

ಹೊಸ ವರುಶ

ನಸು ಬೆಳಕಿನ ತುಸು
ಮುಂಜಾನೆಯಲಿ
ಸೂರ‍್ಯನ ಹೊಂಗಿರಣದ
ಚಾಯೆಯಲಿ
ಹೊಸ ಚೈತನ್ಯದ ಬೆಳಕು
ಹರಿದು ಬರಲಿ

ಮದು ಹೀರುವ ದುಂಬಿಯ
ಜೇಂಕಾರದಲಿ
ಇಂಪಾಗಿ ಹಾಡುವ
ಕೋಗಿಲೆಯ ಗಾನದಲಿ
ಹೊಸತನದ ಹರುಶ
ತೇಲಿ ಬರಲಿ

ಚಿಗುರೆಲೆ ಹಸಿರೆಲೆ
ಕಂಪಿನಲಿ
ಸುಯ್ಯನೆ ಸೂಸುವ
ಸುಳಿಗಾಳಿ ತಂಪಿನಲಿ
ಹೊಸ ವರುಶ ಬರಲಿ
ಹರುಶ ತರಲಿ

(ಚಿತ್ರ ಸೆಲೆ: pixabay)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: