ಸಂಕ್ರಾಂತಿ ಹಬ್ಬದ ವಿಶೇಶ ಅಡುಗೆ ‘ಬರ‍್ತಾ’

– ಸವಿತಾ.

ಬರ‍್ತಾ Bartha

ಬೇಕಾಗುವ ಸಾಮಗ್ರಿಗಳು:

1 ಬದನೆಕಾಯಿ
3 ಹಸಿ ಮೆಣಸಿನಕಾಯಿ
4 ಬೆಳ್ಳುಳ್ಳಿ ಎಸಳು
1/2 ಚಮಚ ಜೀರಿಗೆ
1 ಗಜ್ಜರಿ (ಕ್ಯಾರೆಟ್)
1 ಬಟ್ಟಲು ಹಸಿ ಕಡಲೆಕಾಳು
ಉಪ್ಪು ರುಚಿಗೆ ತಕ್ಕಶ್ಟು
ಸ್ವಲ್ಪ ಕತ್ತರಿಸಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು

ಮಾಡುವ ಬಗೆ:

ಬದನೆಕಾಯಿ ತೊಟ್ಟು ಕತ್ತರಿಸಿ ತೊಳೆದು ಒಂದು ಬಟ್ಟಲಲ್ಲಿ ಹಾಕಿಡಿ. ಗಜ್ಜರಿ ಸಿಪ್ಪೆ ತೆಗೆದು, ತುದಿಯನ್ನು ಸ್ವಲ್ಪ ಕತ್ತರಿಸಿ ತೊಳೆದು ಬದನೆಕಾಯಿ ಜೊತೆ ಸೇರಿಸಿ ಕುಕ್ಕರಿನಲ್ಲಿ ಒಂದು ಕೂಗು ಕುದಿಸಿ ಇಳಿಸಿ ಅತವಾ ಒಂದು ಪಾತ್ರೆಯಲ್ಲೂ ಕುದಿಸಿ ತೆಗೆಯಬಹುದು. ಮತ್ತೆ ಹಸಿ ಮೆಣಸಿನಕಾಯಿ ಕತ್ತರಿಸಿ ಇಟ್ಟುಕೊಳ್ಳಿ.

ಈಗ ಕಡೆಯುವ ಕಲ್ಲಿನಲ್ಲಿ ಕುದಿಸಿದ ಬದನೇಕಾಯಿ, ಗಜ್ಜರಿ, ಬಳಿಕ ಹಸಿ ಮೆಣಸಿನಕಾಯಿ, ಜೀರಿಗೆ, ಬೆಳ್ಳುಳ್ಳಿ, ಉಪ್ಪು ಹಸಿ ಕಡಲೇ ಕಾಳು ಎಲ್ಲಾ ಸೇರಿಸಿ ಚೆನ್ನಾಗಿ ಕುಟ್ಟಿ ತೆಗೆದು ಇಟ್ಟುಕೊಳ್ಳಿ. ಇಶ್ಟಾದರೆ ಆಯಿತು, ರುಚಿಯಾದ ಬರ‍್ತಾ ನಿಮಗೆ ಸವಿಯಲು ಸಿದ್ದವಾದಂತೆ. ಇದಕ್ಕೇ ಸ್ವಲ್ಪ ಕತ್ತರಿಸಿದ ಈರುಳ್ಳಿ ಮತ್ತು ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ರೊಟ್ಟಿ, ಚಪಾತಿ, ಸಜ್ಜಿರೊಟ್ಟಿ ಜೊತೆ ಸಂಕ್ರಾಂತಿ ದಿನದ ವಿಶೇಶ ತಿನಿಸನ್ನಾಗಿ ಮಾಡಿ ಬಡಿಸುತ್ತಾರೆ.

(ಚಿತ್ರ ಸೆಲೆ:  ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: