ಬದನೆಕಾಯಿ ಬಜಿ(ಬಜ್ಜಿ)

– ಸವಿತಾ.

ಬದನೆಕಾಯಿ ಬಜಿ, badanekayi bajji

ಏನೇನು ಬೇಕು?

  • 2 ಬದನೆಕಾಯಿ
  • 3 ಹಸಿ ಮೆಣಸಿನ ಕಾಯಿ
  • 1 ಚಿಟಿಕೆಯಶ್ಟು ಅಡುಗೆ ಸೋಡಾ
  • 1 ಬಟ್ಟಲು ಕಡಲೇಹಿಟ್ಟು
  • 1 ಚಮಚ ಕಾದ ಎಣ್ಣೆ
  • 1/2 ಚಮಚ ಜೀರಿಗೆ
  • 1/2 ಚಮಚ ಓಂ ಕಾಳು
  • 4 ಕರಿಬೇವು ಎಲೆ
  • ಉಪ್ಪು ರುಚಿಗೆ ತಕ್ಕಶ್ಟು
  • ಸ್ವಲ್ಪ ಕೊತ್ತಂಬರಿ ಸೊಪ್ಪು

ಮಾಡುವ ಬಗೆ

ಬದನೆಕಾಯಿಯನ್ನು ದುಂಡು ಹೋಳುಗಳಾಗಿ ಕತ್ತರಿಸಿ ನೀರಿನಲ್ಲಿ ಹಾಕಿ ಇಟ್ಟುಕೊಳ್ಳಿ. ಕಡಲೆಹಿಟ್ಟು, ಸ್ವಲ್ಪ ನೀರು, ಸ್ವಲ್ಪ ಅಡುಗೆ ಸೋಡಾ, ಸ್ವಲ್ಪ ಉಪ್ಪು, ಕಾಲು ಚಮಚ ಜೀರಿಗೆ ಮತ್ತು ಓಂ ಕಾಳು ಪುಡಿ ಮಾಡಿ ಸೇರಿಸಿ. ಒಂದು ಚಮಚ ಕಾದ ಎಣ್ಣೆ ಸೇರಿಸಿ ಹಿಟ್ಟು ಕಲಸಿ ಇಟ್ಟುಕೊಳ್ಳಿ. ಹಿಟ್ಟು ಬೋಂಡಾ ಹದಕ್ಕಿಂತ ತುಸು ಕಡಿಮೆ ಇರಬೇಕು. ಹಸಿ ಮೆಣಸಿನ ಕಾಯಿ ಜೀರಿಗೆ, ಓಂ ಕಾಳು ಕಾಲು ಚಮಚ ಹಾಕಿಕೊಳ್ಳಿ.  ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಎಲ್ಲಾ ಕುಟ್ಟಿ ಪೇಸ್ಟ್ ಮಾಡಿ ಇಟ್ಟುಕೊಳ್ಳಬೇಕು. ಬದನೆಕಾಯಿ ಒಂದು ಹೋಳಿನ ಮೇಲೆ ಹಸಿ ಕಾರ ಹಾಕಿ ಇನ್ನೊಂದು ಬದನೆಕಾಯಿ ಹೋಳು ಇಟ್ಟು ಮುಚ್ಚಿ, ಒಂದೊಂದಾಗಿ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ.

ಈಗ ಬದನೆಕಾಯಿ ಬಜಿ ಸವಿಯಲು ಸಿದ್ದ 🙂

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: