ಹುರುಳಿ ಸಂಗಟಿ

– ಸವಿತಾ.

ಹುರುಳಿ ಸಂಗಟಿ, Hurali Sangati

ಏನೇನು ಬೇಕು?

1 ಲೋಟ – ಹುರುಳಿ ಹಿಟ್ಟು
1 ಲೋಟ – ಬಾಂಬೆ ರವೆ
2 ಲೋಟ – ಬೆಲ್ಲ
7 ಲೋಟ – ನೀರು
3-4 ಚಮಚ – ತುಪ್ಪ

ಮಾಡುವ ಬಗೆ

  • ಹುರುಳಿ ಹುರಿದು ಮಿಕ್ಸರ್ ನಲ್ಲಿ ಹಿಟ್ಟು ಮಾಡಿ ಇಟ್ಟುಕೊಳ್ಳಿ.
  • 2-3 ಚಮಚ ತುಪ್ಪದಲ್ಲಿ ಬಾಂಬೆ ರವೆ ಹುರಿದು 3 ಲೋಟ ನೀರು ಹಾಕಿ ಒಂದು ಕುದಿ ಕುದಿಸಿ.
  • ಹುರುಳಿ ಹಿಟ್ಟನ್ನು ಒಂದು ಲೋಟ ನೀರಿನಲ್ಲಿ ಕಲಸಿ ಸೇರಿಸಿ. ಮತ್ತೆ 3 ಲೋಟ ನೀರು ಸೇರಿಸಿ ಒಂದು ಕುದಿ ಕುದಿಸಿ.
  • ನಂತರ ಬೆಲ್ಲ ಹಾಕಿ ಒಂದು ನಿಮಿಶ ಕುದಿಸಿ, ಸ್ವಲ್ಪ ತುಪ್ಪ ಹಾಕಿ ಇಳಿಸಿ.

ಈಗ ಹುರುಳಿ ಸಂಗಟಿ ತಯಾರಾಯಿತು. ಇದಕ್ಕೆ ಬೇಕಾದರೆ ಸ್ವಲ್ಪ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಶಿ ಸೇರಿಸಬಹುದು. ಹುರುಳಿ ಸಂಗಟಿ ಆರೋಗ್ಯಕ್ಕೂ ಒಳ್ಳೆಯದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: