ಕವಿತೆ: ಪ್ರತೀಕಾರ

— ಸಿಂದು ಬಾರ‍್ಗವ್.

soldiers, ಯೋದರು, ಸೈನಿಕರು

ನಿಲ್ಲಿಸು ನಿನ್ನ ಹೇಡಿತನವ
ನಿಲ್ಲಿಸು ನಿನ್ನ ಹೇಯ ಕ್ರುತ್ಯವ
ಸಾಕುಮಾಡು ನೀಚ ಬುದ್ದಿಯ
ಹೊರಹಾಕು ತಲೆಯೊಳಗಿನ ಲದ್ದಿಯ

ಕರುಣೆಯಿಲ್ಲದ ಕ್ರಿಮಿಯು ನೀನು
ಮಾನವ ಬಾಂಬ್ ಆಗಿಹೆ
ಕಲ್ಲು ಮನಸ್ಸು ಕರಗದು
ಅಂದಕಾರದಿ ತಿರುಗುವೆ

ನಿನಗಂತೂ ಮನೆಯಿಲ್ಲ
ಮಡದಿ-ಮಕ್ಕಳ ಚಿಂತೆಯಿಲ್ಲ
ಮನಸಂತೂ ಕಲ್ಲುಬಂಡೆ
ಹೇಳಿದಂತೆ ಕುಣಿವ ಗೊಂಬೆ

ನಮ್ಮ ಯೋದರ ಪ್ರಾಣ ತೆಗೆದು
ಅಟ್ಟಹಾಸದಿ ಮೆರೆವೆ
ನಿನ್ನ ಪತಾಕೆಯ ನೆಡಲೋಸುಗ
ಪಾಪಿ ಕೆಲಸವ ಮಾಡುವೆ

ಬೆನ್ನ ಹಿಂದೆ ಚೂರಿ ಹಾಕಿ
ಸಗ್ಗ ಪಡೆವ ಆಸೆಯೇ?
ರಣಹೇಡಿಗೆ ಎಂದಿಗೂ
ಶಿಕ್ಶೆ ನಾಕದಲ್ಲಿಯೇ

ಬಳೆಯನಿಲ್ಲಿ ತೊಟ್ಟಿಲ್ಲ
ಸೀಳಿಬಿಡುವರು ಕತ್ತನು
ಚಣಚಣವೂ ನಡುಗುತಲೇ
ಕಳೆವೆ ನೀನು ಬದುಕನು

ಅಂಜುಬುರುಕರಿಲ್ಲ ಇಲ್ಲಿ
ಬಿಡರು ನಿಮ್ಮ ಪ್ರಾಣವ
ಮಾಡುವುದಿನ್ನು ಹೋಮವ
ನಿಮ್ಮ ಮಾರಣಹೋಮವ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: