ಕವಿತೆ: ಅಂತರಾತ್ಮದೊಡನೆ

– ಸ್ಪೂರ‍್ತಿ. ಎಂ.

ಅಂತರಾತ್ಮ, Inner self

ಯಾರಿದ್ದಾರೆ ನನಗೆ
ನಿನ್ನ ಹೊರತು
ಮಾತನಾಡಲೆ ನಿನ್ನ ಬಳಿ
ಸ್ವಲ್ಪ ಹೊತ್ತು

ಸಹನೆಯಿಂದಾಲಿಸುವೆಯಾ
ನನ್ನ ಮಾತು
ಹೇಳುವೆನು ನಿನಗೆ
ಎಲ್ಲದರ ಕುರಿತು

ತಪ್ಪಿದೆ ಒಪ್ಪಿದೆ
ನನ್ನಲ್ಲಿ ಒಂದಿನಿತು
ಬಿಚ್ಚಿಡುವೆ ನಿನ್ನೆದುರಿಗೆಲ್ಲವನು
ಈ ಹೊತ್ತು

ಎಲ್ಲವೂ ನನ್ನಿಂದ
ದಾರಿ ತಪ್ಪಿತ್ತು
ರಕ್ಶಿಸಿದೆ ನೀನೆನ್ನ
ಹೊಣೆಯನ್ನು ಹೊತ್ತು

ಬೇಡುವೆನು ನಿನ್ನ ಬಳಿ
ಮಗುವಂತೆ ಅತ್ತು
ಕಡೆವರೆಗೂ ನನ್ನಲ್ಲಿ
ಸಂಸ್ಕಾರವ ಬಿತ್ತು

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

4 Responses

 1. K.V Shashidhara says:

  ಸೊಗಸಾದ ಕವನ ಸಾಲುಗಳು

 2. Ajit K says:

  ಉತ್ತಮ

 3. Prashantha T says:

  nice ?

 4. Akash Lokhande says:

  ತುಂಬಾ ಅರ್ಥಪೂರ್ಣವಾದ ಸಾಲುಗಳು..

ಅನಿಸಿಕೆ ಬರೆಯಿರಿ: