‘ಬರ’ ನೀನೇಕೆ ಬಂದೆ?

– ವೆಂಕಟೇಶ ಚಾಗಿ.

ಬರ, ಕೊರತೆ, scarcity, drought

ಬರ, ನೀನೇಕೆ ಬಂದೆ?
ಹಸಿದ ಕಂಗಳಲಿ
ಅಕ್ಶರಗಳ ಬರ

ದರೆಯೊಡಲಿನಲಿ
ಅವಿತಿರುವ ಜೀವಕ್ಕೆ
ಜೀವಜಲದ ಬರ

ಗ್ನಾನ ತುಂಬಿದ ಮನದಿ
ಸುಗ್ನಾನದ ಬರ
ಆಡಂಬರದ ಮನದೊಳಗೆ
ಪ್ರೀತಿ ವಾತ್ಸಲ್ಯದ ಬರ

ಬದುಕಿನ ಬರಾಟೆಯ
ಜಂಜಡದ ಸಂತೆಯಲಿ
ಸಮಯದ ಬರ

ಕುಬ್ಜ ಮನಸುಗಳ
ಸುತ್ತ ಸುತ್ತಿರುವ
ಸ್ವಾರ‍್ತ ಪ್ರೇತದ ನಡುವೆ
ಪ್ರೀತಿ ವಾತ್ಸಲ್ಯದ ಬರ

ಬೇಕು ಬೇಡಿಕೆಗಳ
ಬಹುದೊಡ್ಡ ಮೂಟೆಯಲಿ
ಸಂತ್ರುಪ್ತಿಯ ಬರ

ಬಡತನದ ಬೇಗೆಯಲಿ
ನೊಂದ ಜೀವಿಗಳಿಗೆ
ಸಾಂತ್ವನದ ಬರ

ಪ್ರಚಾರ ಅಪಪ್ರಚಾರ
ಮಡಿವಂತಿಕೆಗಳ ನಡುವೆ
ಸ್ವಂತಿಕೆಯ ಬರ

ಜೀವನದ ಚಿಗುರಿನಲಿ
ಅವಳ ಇರುವಿಕೆಯ ಬರ

‘ಬರ’ ನೀನೇಕೆ ಬಂದೆ?
‘ಬರ’ಬಾರದಿತ್ತು
ನೀ ಬರಬಾರದಿತ್ತು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: