ಕವಿತೆ: ಅಮ್ಮ ನನ್ನಮ್ಮ

ಶಶಾಂಕ್.ಹೆಚ್.ಎಸ್.

ಮಹಿಳೆ, Woman

ನೋವನ್ನು ನುಂಗಿ ನನಗೆ ಜನ್ಮ ನೀಡಿದವಳವಳು
ಎಲ್ಲವನ್ನೂ ಸಹಿಸಿಕೊಂಡು ನನ್ನನ್ನು ಸಲುಹಿ ಬೆಳೆಸಿದವಳವಳು
ನನಗೆ ಉಸಿರು ಹೆಸರು ಬದುಕು ನೀಡಿದವಳವಳು

ನನ್ನ ತೊದಲು ಮಾತಿಗೆ ಆನಂದ ಪಟ್ಟವಳವಳು
ಹಸಿದಾಗ ಕೈ ತುತ್ತನು ನೀಡಿ ಹಸಿವ ತಣಿಸಿದವಳವಳು
ನಾನು ಅಳುವಾಗ ನನ್ನ ಜೊತೆ ಅತ್ತವಳವಳು

ನಾನು ತಪ್ಪು ಮಾಡಿದಾಗ ತಿದ್ದಿ ತೀಡಿದವಳವಳು
ಬದುಕಿನ ಪಾಟ ನೀತಿ ನಿಯಮಗಳ ಕಲಿಸಿದವಳವಳು
ನನ್ನ ಪ್ರತೀ ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಂತವಳವಳು

ನಾನು ಗೆಲುವು ಪಡೆದಾಗ ತಾನೇ ಗೆದ್ದ ರೀತಿಯಲ್ಲಿ ಸಂಬ್ರಮಿಸಿದವಳವಳು
ನಾನು ಸೋತು ಕುಗ್ಗಿದಾಗ ದೈರ‍್ಯ ಆತ್ಮವಿಶ್ವಾಸ ತುಂಬಿದವಳವಳು
ನನ್ನ ಬದುಕಿನ ಜೀವನಾಡಿ ಅವಳು
ಕನಸಿನಲ್ಲೂ ನನ್ನ ಕಾಯುವವಳವಳು

“ಅಮ್ಮ ನನ್ನಮ್ಮ”

(ಚಿತ್ರ ಸೆಲೆ: artponnada.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: