ಕವಿತೆ: ಉತ್ತರವಿಲ್ಲದ ಪ್ರಶ್ನೆಗಳ ಮಾಲೀಕ

ಶಶಾಂಕ್.ಹೆಚ್.ಎಸ್.

ಒಂಟಿತನ, Loneliness

ಬದುಕಿನ ಪಯಣದಲ್ಲಿ ಏಕಾಂಗಿ ಪಯಣಿಗ ನಾನು
ಉತ್ತರವಿಲ್ಲದ ಪ್ರಶ್ನೆಗಳ ಮಾಲೀಕ ನಾನು

ಗೊತ್ತು ಗುರಿ ಇಲ್ಲದೆ ಅಲೆಮಾರಿಯಾಗಿರುವವನು ನಾನು
ಬದುಕಿನ ದೋಣಿಯ ದಡ ಸೇರಿಸಲಾಗದ ನಾವಿಕ ನಾನು
ಜೇವನದ ಮುಂದಿನ ದಾರಿ ತಿಳಿಯದ ಅನ್ವೇಶಣೆಗಾರ ನಾನು
ಎಲ್ಲವನ್ನೂ ಮೂಡವಾಗಿ ನಂಬುವ ಅಗ್ನಾನಿ ನಾನು
ಈ ಜೀವನದ ಪಾಟ ಕಲಿಯಲಾಗದ ವಿದ್ಯಾರ‍್ತಿ ನಾನು
ಎಲ್ಲವನ್ನೂ ಮನಸಿಗೆ ಹಚ್ಚಿಕೊಳ್ಳುವ ಹುಚ್ಚ ನಾನು
ಸಂಚಿಗೆ ಬಲಿಯಾಗಿ ಶಿಕ್ಶೆ ಅನುಬವಿಸುತ್ತಿರುವವನು ನಾನು
ಯಾವುದನ್ನೂ ಅರಿಯದೆ ಮೋಸಹೋದವನು ನಾನು
ಯಾವ ತಪ್ಪು ಮಾಡದಿದ್ದರೂ ಅಪರಾದಿ ಸ್ತಾನದಲ್ಲಿರುವವನು ನಾನು
ಯಾರ ಮನಸ್ಸಿಗೂ ನೋವು ನೀಡದ್ದಿದರು ಕೆಟ್ಟವನು ಎಂಬ ಪಟ್ಟ ಪಡೆದವನು ನಾನು
ಯಾರಿಗೂ ಮೋಸ ಮಾಡದಿದ್ದರೂ ಮೋಸಗಾರನಾದವನು ನಾನು
ಬಂದು ಬಳಗದಿಂದ ದೂರವಾಗಿ ಒಬ್ಬಂಟಿಯಾಗಿ ಬದುಕುತ್ತಿರುವವನು ನಾನು
ಸಮಾಜದಿಂದ ದೂರವಾಗಿ ಏಕಾಂಗಿಯಾಗಿರುವವನು ನಾನು
ನಾನು ಯಾರೆಂದು ಗುರುತಿಸಿಕೊಳ್ಳಲಾಗದ ಅನಾಮಿಕ ನಾನು

ಬದುಕಿನ ಪಯಣದಲ್ಲಿ ಏಕಾಂಗಿ ಪಯಣಿಗ ನಾನು
ಉತ್ತರವಿಲ್ಲದ ಪ್ರಶ್ನೆಗಳ ಮಾಲೀಕ ನಾನು

( ಚಿತ್ರ ಸೆಲೆ: freegreatpicture.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: