ಜೋಳದ ಹಿಟ್ಟಿನ ಚಕ್ಕುಲಿ

– ಸವಿತಾ.

ಜೋಳ, ಚಕ್ಕುಲಿ, joLa, jowar, chakkuli

ಬೇಕಾಗುವ ಸಾಮಾನುಗಳು

  • ಜೋಳದ ಹಿಟ್ಟು – 1 ಲೋಟ
  • ಹುರಿಗಡಲೆ ಹಿಟ್ಟು – 1/2 ಲೋಟ
  • ಕಾದ ಎಣ್ಣೆ – 2 ಚಮಚ
  • ಒಣ ಕಾರ – 1 ಚಮಚ
  • ಉಪ್ಪು – 1 ಚಮಚ
  • ಬಿಳಿ ಎಳ್ಳು – 1 ಚಮಚ
  • ಎಣ್ಣೆ – ಕರಿಯಲು

ಮಾಡುವ ವಿದಾನ

ಜೋಳದ ಹಿಟ್ಟನ್ನು ಜರಡಿ ಹಿಡಿದು ಇಟ್ಟುಕೊಳ್ಳಿ. ಮಿಕ್ಸರ್ ನಲ್ಲಿ ಹುರಿಗಡಲೆಯನ್ನು ನುಣ್ಣಗೆ ಪುಡಿಮಾಡಿ ಕೊಂಡು ಸ್ವಲ್ಪ ಕಾದ ಎಣ್ಣೆ, ಉಪ್ಪು, ಒಣ ಕಾರ, ಬಿಳಿ ಎಳ್ಳು, ನೀರು ಹಾಕಿ ಸ್ವಲ್ಪ ಗಟ್ಟಿಯಾಗಿ ಕಲಸಿ ಹತ್ತು ನಿಮಿಶ   ಇಡಬೇಕು.

ಚಕ್ಕುಲಿ ಒರಳಿಗೆ ಸ್ವಲ್ಪ ನೀರು ಚಿಮುಕಿಸಿ ಹಿಟ್ಟು ಹಾಕಿ, ಚಕ್ಕುಲಿಯನ್ನು ಕಾದ ಎಣ್ಣೆಯಲ್ಲಿ ಬಿಟ್ಟು ಕರಿದು ತೆಗೆಯಬೇಕು. ಈಗ ಚಕ್ಕುಲಿ  ಸವಿಯಲು ಸಿದ್ದ. ಹದಿನೈದು ದಿನಗಳವರೆಗೆ ಇಟ್ಟುಕೊಂಡು ತಿನ್ನಬಹುದು.

(ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: