ಕವಳೆ ಕಾಯಿ ಚಟ್ನಿ

– ಸವಿತಾ.

ಕವಳೆ ಕಾಯಿ ಚಟ್ನಿ

ಬೇಕಾಗುವ ಪದಾರ‍್ತಗಳು:

1 ಬಟ್ಟಲು ಕವಳೆ ಕಾಯಿ
1 ಬಟ್ಟಲು ಕಡಲೆ ಬೇಳೆ
1/4 ಬಟ್ಟಲು ಕರಿಬೇವು ಎಲೆ
1/2 ಬಟ್ಟಲು ಕೊತ್ತಂಬರಿ ಸೊಪ್ಪು
4 ಹಸಿ ಮೆಣಸಿನ ಕಾಯಿ
1 ಏಲಕ್ಕಿ
1 ಲವಂಗ
1/4 ಚಮಚ ಜೀರಿಗೆ
10 ಎಸಳು ಬೆಳ್ಳುಳ್ಳಿ
ಉಪ್ಪು ರುಚಿಗೆ ತಕ್ಕಶ್ಟು
2 ಚಮಚ ಬೆಲ್ಲದ ಪುಡಿ

ಮಾಡುವ ಬಗೆ:

ಮೊದಲಿಗೆ ಕವಳೆ ಕಾಯಿಯನ್ನು ತೊಳೆದು ಇಟ್ಟುಕೊಳ್ಳಿ. ಇನ್ನೊಂದು ಕಡೆ ಕಡಲೆ ಬೇಳೆಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಇಟ್ಟುಕೊಳ್ಳಿ.

ಬೆಳ್ಳುಳ್ಳಿ ಎಸಳು, ಕರಿಬೇವು, ಕವಳೆ ಕಾಯಿ, ಜೀರಿಗೆ, ಹಸಿ ಮೆಣಸಿನ ಕಾಯಿ, ಏಲಕ್ಕಿ, ಲವಂಗ ಎಲ್ಲವನ್ನು ಸ್ವಲ್ಪ ಹುರಿದು ತೆಗೆದಿಡಿ. ಇದು ಆರಿದ ನಂತರ ನೆನೆಸಿದ ಕಡಲೆ ಬೇಳೆ, ಉಪ್ಪು, ಕೊತ್ತಂಬರಿ ಸೊಪ್ಪು, ಬೆಲ್ಲದ ಪುಡಿ ಸೇರಿಸಿ ಮಿಕ್ಸರ‍್‌ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಕವಳೆ ಕಾಯಿ ಚಟ್ನಿ ಸವಿಯಲು ಸಿದ್ದ. ಇದನ್ನು ಚಪಾತಿ, ರೊಟ್ಟಿ ಅತವಾ ಅನ್ನದ ಜೊತೆ ಸವಿಯಿರಿ.

ಈ ಬೇಸಿಗೆಯಲ್ಲಿ ಕವಳೆಕಾಯಿ, ಮಾವಿನ ಕಾಯಿ ಸಿಗುವುದು ಜಾಸ್ತಿ. ಮಾವಿನ ಕಾಯಿ ಬಳಸಿ ಮಾವಿನ ಕಾಯಿ ಚಟ್ನಿಯನ್ನು ಕೂಡ ಇದೇ ರೀತಿ ಮಾಡಬಹುದು.

(ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: