ಹುಣಸೆಹಣ್ಣಿನ ಸಾರು

–  ಸವಿತಾ.

ಹುಣಸೆಹಣ್ಣಿನ ಸಾರು, Tamarind Soup

ಏನೇನು ಬೇಕು?

  • ಒಂದು ಸಣ್ಣ ನಿಂಬೆ ಅಳತೆಯಶ್ಟು ಹುಣಸೆಹಣ್ಣು
  • 7-8 ಕರಿಬೇವು ಎಲೆ
  • 5-6 ಎಸಳು ಬೆಳ್ಳುಳ್ಳಿ
  • 3 ಚಮಚ ಒಣಕೊಬ್ಬರಿ ತುರಿ
  • 2 ಒಣ ಮೆಣಸಿನಕಾಯಿ
  • 2 ಚಮಚ ಬೆಲ್ಲ
  • 1 ಚಮಚ ಒಣಕಾರದ ಪುಡಿ
  • 1 ಚಮಚ ದನಿಯಾ ಪುಡಿ
  • 1/4 ಚಮಚ ಸಾಸಿವೆ
  • 1/4 ಚಮಚ ಜೀರಿಗೆ
  • 1/4 ಚಮಚ ಇಂಗು
  • 1/4 ಬಟ್ಟಲು ಕೊತ್ತಂಬರಿ ಸೊಪ್ಪು
  • ಸ್ವಲ್ಪಅರಿಶಿಣ ಮತ್ತು ರುಚಿಗೆ ತಕ್ಕಶ್ಟು ಉಪ್ಪು
  • ಸ್ವಲ್ಪ ಎಣ್ಣೆ

ಮಾಡುವ ಬಗೆ

  • ಹುಣಸೆ ಹಣ್ಣು ನೀರಿನಲ್ಲಿ ಅರ‍್ದ ಗಂಟೆ ಕಾಲ ನೆನೆ ಹಾಕಿ ಬಳಿಕ ರಸ ತೆಗೆದು ಸೋಸಿ ಇಟ್ಟುಕೊಳ್ಳಿ.
  • ಬೆಳ್ಳುಳ್ಳಿ ಎಸಳು ಸುಲಿದು ಸ್ವಲ್ಪ ಜಜ್ಜಿ ಇಟ್ಟುಕೊಳ್ಳಿ.
  • ಎಣ್ಣೆ ಬಿಸಿ ಮಾಡಿ ಮೊದಲು ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಹುರಿದು ನಂತರ ಇಂಗು, ಬೆಳ್ಳುಳ್ಳಿ, ಒಣಕೊಬ್ಬರಿ ತುರಿ, ಒಣ ಮೆಣಸಿನಕಾಯಿ ತುಂಡು ಮಾಡಿ ಹಾಕಿ ಹುರಿಯಿರಿ.
  • ನಂತರ ಹುಣಸೆ ರಸ ಸೇರಿಸಿ. ಉಪ್ಪು, ಅರಿಶಿಣ, ಒಣ ಕಾರ, ದನಿಯಾ ಪುಡಿ ಮತ್ತು ಬೆಲ್ಲದ ಪುಡಿ ಸೇರಿಸಿ.
  • 3 ಲೋಟ ನೀರು ಸೇರಿಸಿ ಒಂದು ಕುದಿ ಕುದಿಸಿ.
ಈಗ ಹುಣಸೆಹಣ್ಣಿನ ಸಾರು ಸವಿಯಲು ಸಿದ್ದ. ಇದಕ್ಕೆ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಅಲಂಕಾರ ಮಾಡಿ ಅನ್ನದ ಜೊತೆ ಬಡಿಸಿ 🙂

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. JUJARE MADHUSUDAN says:

    Very tangy taste, nice akka, Dhanyawadagakul

  2. JUJARE MADHUSUDAN says:

    Nice, beutiful

ಅನಿಸಿಕೆ ಬರೆಯಿರಿ:

%d bloggers like this: