ಹುಣಸೆಹಣ್ಣಿನ ಸಾರು
– ಸವಿತಾ.
ಏನೇನು ಬೇಕು?
- ಒಂದು ಸಣ್ಣ ನಿಂಬೆ ಅಳತೆಯಶ್ಟು ಹುಣಸೆಹಣ್ಣು
- 7-8 ಕರಿಬೇವು ಎಲೆ
- 5-6 ಎಸಳು ಬೆಳ್ಳುಳ್ಳಿ
- 3 ಚಮಚ ಒಣಕೊಬ್ಬರಿ ತುರಿ
- 2 ಒಣ ಮೆಣಸಿನಕಾಯಿ
- 2 ಚಮಚ ಬೆಲ್ಲ
- 1 ಚಮಚ ಒಣಕಾರದ ಪುಡಿ
- 1 ಚಮಚ ದನಿಯಾ ಪುಡಿ
- 1/4 ಚಮಚ ಸಾಸಿವೆ
- 1/4 ಚಮಚ ಜೀರಿಗೆ
- 1/4 ಚಮಚ ಇಂಗು
- 1/4 ಬಟ್ಟಲು ಕೊತ್ತಂಬರಿ ಸೊಪ್ಪು
- ಸ್ವಲ್ಪಅರಿಶಿಣ ಮತ್ತು ರುಚಿಗೆ ತಕ್ಕಶ್ಟು ಉಪ್ಪು
- ಸ್ವಲ್ಪ ಎಣ್ಣೆ
ಮಾಡುವ ಬಗೆ
- ಹುಣಸೆ ಹಣ್ಣು ನೀರಿನಲ್ಲಿ ಅರ್ದ ಗಂಟೆ ಕಾಲ ನೆನೆ ಹಾಕಿ ಬಳಿಕ ರಸ ತೆಗೆದು ಸೋಸಿ ಇಟ್ಟುಕೊಳ್ಳಿ.
- ಬೆಳ್ಳುಳ್ಳಿ ಎಸಳು ಸುಲಿದು ಸ್ವಲ್ಪ ಜಜ್ಜಿ ಇಟ್ಟುಕೊಳ್ಳಿ.
- ಎಣ್ಣೆ ಬಿಸಿ ಮಾಡಿ ಮೊದಲು ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಹುರಿದು ನಂತರ ಇಂಗು, ಬೆಳ್ಳುಳ್ಳಿ, ಒಣಕೊಬ್ಬರಿ ತುರಿ, ಒಣ ಮೆಣಸಿನಕಾಯಿ ತುಂಡು ಮಾಡಿ ಹಾಕಿ ಹುರಿಯಿರಿ.
- ನಂತರ ಹುಣಸೆ ರಸ ಸೇರಿಸಿ. ಉಪ್ಪು, ಅರಿಶಿಣ, ಒಣ ಕಾರ, ದನಿಯಾ ಪುಡಿ ಮತ್ತು ಬೆಲ್ಲದ ಪುಡಿ ಸೇರಿಸಿ.
- 3 ಲೋಟ ನೀರು ಸೇರಿಸಿ ಒಂದು ಕುದಿ ಕುದಿಸಿ.
ಈಗ ಹುಣಸೆಹಣ್ಣಿನ ಸಾರು ಸವಿಯಲು ಸಿದ್ದ. ಇದಕ್ಕೆ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಅಲಂಕಾರ ಮಾಡಿ ಅನ್ನದ ಜೊತೆ ಬಡಿಸಿ 🙂
Very tangy taste, nice akka, Dhanyawadagakul
Nice, beutiful