ಕವಿತೆ: ಬಣ್ಣದ ಚಿಟ್ಟೆ

ವೆಂಕಟೇಶ ಚಾಗಿ.

ಚಿಟ್ಟೆ, Butterfly

ಬಾನಲಿ ಹಾರುವ
ಬಣ್ಣದ ಚಿಟ್ಟೆ
ಹೇಳು ನಿನ್ನ ಹೆಸರೇನು?
ಅತ್ತ ಇತ್ತ
ಓಡುತ ಜಿಗಿಯುತ
ಎಲ್ಲಿಗೆ ಹೊರಟೆ ನೀ ಹೇಳು

ಹೂವಿಂದೂವಿಗೆ
ಹಾರುವೆ ನೀನು
ಯಾವ ಹೂವು ನಿನಗಿಶ್ಟ?
ಹೂವನು ಮುಡಿಯದೇ
ನಲಿಯುವೆ ನೀನು
ಏರುವೆ ಕುಶಿಯಲಿ ನೀ ಬೆಟ್ಟ

ಹಿಡಿಯಲು ಹೋದರೆ
ತಪ್ಪಿಸಿಕೊಳ್ಳುವೆ
ಏನನು ಹುಡುಕುವೆ ನೀ ಹೇಳು?
ನನ್ನಯ ಸಹಾಯ
ಬೇಡವೆ ನಿನಗೆ
ಗೆಳೆಯರು ನಾವು ನೀ ಕೇಳು

ಅತ್ತಿಂದಿತ್ತ
ಇತ್ತಿಂದತ್ತ
ನೀ ಓಡುವ ಬಗೆಯೇ ಸುಂದರ
ಕಾಮನ ಬಿಲ್ಲನು
ಏರುವ ಸಾಹಸ
ಮಾಡುವ ನೀನೆ ಸಾಹುಕಾರ

ನಿನ್ನಯ ಬಣ್ಣವ
ನಮಗೂ ನೀಡು
ಹಾಡುವ ಕುಶಿಯಲಿ ನಾವಿಂದು
ರೆಕ್ಕೆಯ ಬಡಿಯುತ
ಲೋಕವ ಸುತ್ತುತ
ಕುಶಿಯಲಿ ಬದುಕುವ ಎಂದೆಂದೂ

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: