ಕವಿತೆ: ಚಂದ್ರಯಾನ

– ಚಂದ್ರಗೌಡ ಕುಲಕರ‍್ಣಿ.

ಚಂದ್ರಯಾನ, chandrayaan

 

ಕೋಟಾದಿಂದ ಹಾರಿಸಿಬಿಡುವುದು
ಬಾಹ್ಯಾಕಾಶ ಕೇಂದ್ರ
ಏರುತ ಏರುತ ಬಾನ ಬಂಡಿಯು
ಮುಟ್ಟಲೆಂದು ಚಂದ್ರ

ಚಂದ್ರಯಾನಕೆ ಸಿದ್ದವಾಗಿದೆ
ಪ್ರಗ್ನಾನ್ ವ್ಯೋಮ ನೌಕೆ
ಆರು ಚಕ್ರದ ರೋವರ್ ನಲ್ಲಿ
ಸೌರ ಶಕ್ತಿಯ ಬಳಕೆ

ಕಕ್ಶೆಗೆ ಹೊತ್ತು ಒಯ್ಯುತಲಿಹುದು
ಜಿ ಎಸ್ ಎಲ್ ವಿ ಮಾರ‍್ಕು
ಲಕ್ಶ ಕಿಲೋ ಮೀಟರ್ ಎತ್ರಕೆ
ಹಾರಿಸಿಬಿಟ್ರೆ ಸಾಕು

ಬಾಹುಬಲಿವೀರ ರಾಕೆಟ್ ನಿಂದ
ಚಂದ್ರನ ದಕ್ಶಿಣ ದ್ರುವಕೆ
ಜೋಕೆಯಿಂದ ಇಳಿಸಿಬಿಡುವುದು
ವಿಕ್ರಮ ಲ್ಯಾಂಡರ್ ನೆಲಕೆ

ನಾಲ್ವತ್ತೇಳ್ದಿನ ಯಾನವ ಮುಗಿಸಿ
ಇಳಿದರೆ ಚಂದ್ರನ ಕುಳಿಗೆ
ಸೆಪ್ಟೆಂಬರ್ ಆರಾಗುವುದು
ದೇಶಕೆ ಶುಬದ ಗಳಿಗೆ

ದೊಡ್ಡ ಕಂದರ ಚಂದ್ರ ಕುಳಿಯಲಿ
ತಿರುಗಿ ಅತ್ತ ಇತ್ತ
ದಿನವು ದಿನವು ಕಳಿಸಲಿರುವುದು
ವಿಸ್ಮಯ ಬೆರಗಿನ ಚಿತ್ರ

ಬಾರತ ದೇಶದ ಅರಿಮೆಯ ಕಳಸಕೆ
ಮುಡಿಪು ನನ್ನ ಕವನ
ಇಸ್ರೋ ಸಂಸ್ತೆಗೆ ಸಲ್ಲಿಸಬೇಕು
ಈಗಿಂದೀಗಲೆ ನಮನ

(ಚಿತ್ರ ಸೆಲೆ: zeenews.india.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Kiran G says:

    ???????

  2. K.V Shashidhara says:

    ಸುಂದರ ಕವನ ???

ಅನಿಸಿಕೆ ಬರೆಯಿರಿ: