ಕವಿತೆ: ಬಾ ಬಾ ಗಣಪ

– ವೆಂಕಟೇಶ ಚಾಗಿ.

ಗಣಪ, ganesh

ಬಾ ಬಾ ಗಣಪ
ನಮ್ಮ ಗಣಪ
ಬಾರೋ ನಮ್ಮನೆಗೆ
ಮೋದಕ ಕಡುಬು
ಹಣ್ಣು ಹಂಪಲು
ಕೊಡುವೆ ನಾ ನಿನಗೆ

ಚೌತಿಯ ದಿನದಿ
ಬರುವೆ ನೀನು
ತುಂಬಾ ಕುಶಿ ನಮಗೆ
ನಿನ್ನನು ಕಂಡು
ಕೈಯನು ಮುಗಿವೆ
ವರವ ಕೊಡು ನಮಗೆ

ವಿದ್ಯಾ ಬುದ್ದಿಯ
ಸದಾ ಕರುಣಿಸಿ
ಕರುಣೆ ನೀಡೆಮಗೆ
ನಾವು ಮಾಡಿದ
ತಪ್ಪನು ಮನ್ನಿಸಿ
ಸನ್ಮಾರ‍್ಗವ ತೋರೆಮಗೆ

ನಮ್ಮ ಕನಸಿಗೆ
ನಿನ್ನ ಒಲುಮೆಯ
ದಯೆಯು ನಮಗಿರಲಿ
ಕಶ್ಟವು ದುಕ್ಕವೂ
ಬದುಕಲಿ ಬರಲು
ನಮ್ಮಯ ದೈರ‍್ಯ ನೀನಿರುವೆ

ಸುಂದರ ಬೂಮಿಯ
ಸುಂದರ ಪರಿಸರ
ಉಳಿಸುವ ಬುದ್ದಿ ನೀಡಿಂದು
ಎಲ್ಲರು ಒಂದೇ
ನಿನ್ನಯ ಮುಂದೆ
ಕರುಣಿಸು ನಮ್ಮನೆಂದೆಂದೂ

(ಚಿತ್ರ ಸೆಲೆ:  shortday.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: