ಮಾಡಿ ಸವಿಯಿರಿ ಬಾಸುಂದಿ

– ಸವಿತಾ.

ಬಾಸುಂದಿ, ಸಿಹಿ, basundi, sweet

ಏನೇನು ಬೇಕು?

  • ಹಾಲು – 2 ಲೀಟರ್
  • ಕೇಸರಿ ದಳ – 6
  • ಗೋಡಂಬಿ – 10
  • ಬಾದಾಮಿ – 10
  • ಪಿಸ್ತಾ – 10
  • ಏಲಕ್ಕಿ – 4
  • ಜಾಯಿಕಾಯಿ ಪುಡಿ – ಒಂದು ಚಿಟಿಕೆ

ಮಾಡುವುದು ಹೇಗೆ?

ಹಾಲು ಕಾಯಿಸಿ ಚೆನ್ನಾಗಿ ಕುದಿಸಿ. ಕುದಿಯುವ ಹಾಲು ಉಕ್ಕಿ ಹರಿಯದಂತೆ ಮದ್ಯಮ ಉರಿಯಲ್ಲಿ ಇಟ್ಟು ಅರ‍್ದ ಆಗುವವರೆಗೆ ಕುದಿಸಿ, ಕೇಸರಿ ದಳ ಸೇರಿಸಿ. ಹಾಲು ಕೆನೆ ಸೇರಿ ಕ್ರೀಮ್ ನಂತೆ ಗಟ್ಟಿಯಾಗುವವರೆಗೆ ಕುದಿಸಿ. ಮೊದಲಿಗೆ ಇದ್ದ ಹಾಲಿನ ಕಾಲು ಬಾಗ ಆಗುವವರೆಗೆ ಕುದಿಸಿ. ಬಳಿಕ ಒಲೆ ಆರಿಸಿ, ಏಲಕ್ಕಿ ಪುಡಿ ಜಾಯಿಕಾಯಿ ಪುಡಿ ಸೇರಿಸಿ ಕೈಯಾಡಿಸಿ.

ಇದನ್ನು ತಣ್ಣಗಾದ ನಂತರ ಪ್ರಿಡ್ಜ್ ನಲ್ಲಿ ಇಟ್ಟು ತಂಪು ಮಾಡಿಕೊಂಡು ತಿನ್ನಬಹುದು. ಹಾಗೆಯೇ ಬಿಸಿ ಬಿಸಿಯಾಗಿ ಕೂಡ ಸವಿಯಬಹುದು. ಕತ್ತರಿಸಿದ ಗೋಡಂಬಿ, ಬಾದಾಮಿ, ಪಿಸ್ತಾ ಚೂರುಗಳನ್ನು ಮೇಲೆ ಹಾಕಿ ಸವಿಯಲು ನೀಡಿ.

ಇದನ್ನು ಹೆಚ್ಚಾಗಿ ಗುಜರಾತ್, ಮಹಾರಾಶ್ಟ್ರ, ಕರ‍್ನಾಟಕದಲ್ಲಿ ಮಾಡುವ ರೂಡಿ ಇದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks