ಹಬ್ಬದ ಸಿಹಿ: ಹೆಸರು ಉಂಡೆ

– ಸವಿತಾ.

ಹೆಸರು ಕಾಳಿನ ಉಂಡೆ, ಹೆಸರು, hesaru, unde

ನವರಾತ್ರಿಯ ಹೊತ್ತಿನಲ್ಲಿ ಒಂಬತ್ತು ದಿನ ಬಗೆಬಗೆಯ ಪ್ರಸಾದ ಮಾಡುತ್ತಾರೆ. ನವರಾತ್ರಿ ಪ್ರಸಾದಕ್ಕೆ ಮಾಡುವ ವಿಶೇಶ ಸಿಹಿಗಳಲ್ಲಿ ಹೆಸರು ಉಂಡೆಯೂ ಒಂದು.

ಬೇಕಾಗುವ ಸಾಮಾನುಗಳು

  • ಹೆಸರು ಹಿಟ್ಟು – 2 ಲೋಟ
  • ಬೆಲ್ಲದಪುಡಿ – 1 ಲೋಟ
  • ತುಪ್ಪ – 1 ಲೋಟ
  • ಏಲಕ್ಕಿ- 2
  • ಲವಂಗ – 2
  • ಗಸಗಸೆ – 1 ಚಮಚ

ಮಾಡುವ ಬಗೆ

ಹೆಸರು ಕಾಳು ಹುರಿದು, ತಣ್ಣಗಾದ ಮೇಲೆ ಮಿಕ್ಸರ್ ನಲ್ಲಿ ಪುಡಿ ಮಾಡಿ ಇಲ್ಲವೇ ಗಿರಣಿಯಲ್ಲಿ ಬೀಸಿ ಹಿಟ್ಟು ಮಾಡಿ ಇಟ್ಟುಕೊಳ್ಳಿ. ಹೆಸರು ಹಿಟ್ಟಿಗೆ ತುಪ್ಪ ಸೇರಿಸಿ ಚೆನ್ನಾಗಿ ಹುರಿದು ತೆಗೆದಿಡಿ.

ಬೆಲ್ಲದ ಪುಡಿ ಮಾಡಿ ಸ್ವಲ್ಪ ಬಿಸಿ ಮಾಡಿ ಬೆಲ್ಲ ಕರಗಿಸಿ. ನಂತರ ಹೆಸರು ಹಿಟ್ಟು ಹಾಕಿ ಕಲಸಿ. ಏಲಕ್ಕಿ ಲವಂಗ ಮತ್ತು ಗಸಗಸೆ ಸ್ವಲ್ಪ ತವೆಯಲ್ಲಿ ಹುರಿದು ಪುಡಿ ಮಾಡಿ ಸೇರಿಸಿ ಕೈಯಾಡಿಸಿ.

ಕೈಗೆ ಸ್ವಲ್ಪ ತುಪ್ಪ ಹಚ್ಚಿಕೊಂಡು ತಿಕ್ಕಿ ಒಂದೊಂದೇ ಉಂಡೆ ಕಟ್ಟಿ ಇಟ್ಟುಕೊಳ್ಳಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: