ಕುಂಬಳಕಾಯಿ ಗಾರಿಗೆ

– ಸವಿತಾ.

ಕುಂಬಳಕಾಯಿ, ಗಾರಿಗೆ, kumbalakayi, gaarige, sweet, pumpkin

ಬೇಕಾಗುವ ಸಾಮಾನುಗಳು

  • ಕುಂಬಳಕಾಯಿ – 1/4 ಕಿಲೋ
  • ಬೆಲ್ಲ – 150 ಗ್ರಾಮ್
  • ಗೋದಿ ಹಿಟ್ಟು – 1/4 ಕಿಲೋ
  • ಏಲಕ್ಕಿ – 2
  • ಎಣ್ಣೆ – ಕರಿಯಲು
  • ಉಪ್ಪು – ಸ್ವಲ್ಪ (ಬೇಕಾದರೆ)

ಮಾಡುವ ಬಗೆ

ಕುಂಬಳಕಾಯಿ ತೊಳೆದು, ಎರಡು ಮೂರು ಹೋಳುಗಳಾಗಿ ಕತ್ತರಿಸಿ ಕುಕ್ಕರ್ ನಲ್ಲಿ ಮೂರು ಕೂಗು ಕುದಿಸಿ ಇಳಿಸಿ. ಬೆಲ್ಲ ಪುಡಿ ಮಾಡಿಟ್ಟುಕೊಂಡು ಕುಂಬಳಕಾಯಿ ಸಿಪ್ಪೆ ಕತ್ತರಿಸಿ ತೆಗೆದು ಕಲಸಿಕೊಳ್ಳಿ. ಗೋದಿ ಹಿಟ್ಟು, ಏಲಕ್ಕಿ ಪುಡಿ ಸೇರಿಸಿ ಎಲ್ಲ ಹೊಂದಿಕೊಳ್ಳುವ ಹಾಗೆ ನಾದಿ.

ಸ್ವಲ್ವ ಹೊತ್ತಿನ ಬಳಿಕ ಇನ್ನೊಮ್ಮೆ ಚೆನ್ನಾಗಿ ಕಲಸಿ, ಬೇಕಾದ ಅಳತೆ ಹಿಟ್ಟು ಹಿಡಿದು ಕೈಯಿಂದ ಸ್ವಲ್ಪ ತಟ್ಟಿ ವಡೆ ತರಹ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ. ಈಗ ಕುಂಬಳ ಕಾಯಿ ಗಾರಿಗೆ ಸವಿಯಲು ಸಿದ್ದ. ಒಂದು ವಾರ ಇಟ್ಟು ತಿನ್ನಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: