ನೆಲ್ಲಿಕಾಯಿ ಚಟ್ನಿ

– ಸವಿತಾ.

ನೆಲ್ಲಿಕಾಯಿ ಚಟ್ನಿ, gooseberry chutney, nellikayi

ಬೇಕಾಗುವ ಸಾಮಾನುಗಳು

  • ನೆಲ್ಲಿಕಾಯಿ – 1 ಬಟ್ಟಲು
  • ಕಡಲೇ ಬೇಳೆ – 1/2 ಬಟ್ಟಲು
  • ಕರಿಬೇವು ಎಲೆ – 20
  • ಕೊತ್ತಂಬರಿ ಸೊಪ್ಪು – 7-8 ಕಡ್ಡಿ
  • ಬೆಳ್ಳುಳ್ಳಿ – 4 ಎಸಳು
  • ಜೀರಿಗೆ – 1 ಚಮಚ
  • ಹಸಿಮೆಣಸಿನಕಾಯಿ – 4
  • ಬೆಲ್ಲ -1 ಚಮಚ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ನೆಲ್ಲಿಕಾಯಿ ತೊಳೆದು ಬೀಜ ತೆಗೆದು ಕತ್ತರಿಸಿ ಇಟ್ಟುಕೊಳ್ಳಿ. ಬೆಳ್ಳುಳ್ಳಿ ಎಸಳು ಬಿಡಿಸಿ ಇಟ್ಟುಕೊಳ್ಳಿ. ಕಡಲೇ ಬೇಳೆ ಎರಡು ಗಂಟೆ ಕಾಲ ನೆನೆಯಲು ಇಡಬೇಕು.

ಕತ್ತರಿಸಿದ ನೆಲ್ಲಿಕಾಯಿ, ನೆನೆಸಿದ ಕಡಲೆಬೇಳೆ, ಹಸಿ ಮೆಣಸಿನಕಾಯಿ, ಜೀರಿಗೆ, ಕರಿಬೇವು, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಎಸಳು ಮತ್ತು ಬೆಲ್ಲ ಸೇರಿಸಿ ಮಿಕ್ಸರ್ ನಲ್ಲಿ ರುಬ್ಬಿ. ಈಗ ನೆಲ್ಲಿಕಾಯಿ ಚಟ್ನಿ ಸವಿಯಲು ಸಿದ್ದ. ಹಸಿ ನೆಲ್ಲಿಕಾಯಿ ಚಟ್ನಿ ಅನ್ನ, ರೊಟ್ಟಿ ಮತ್ತು ಚಪಾತಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: