ಕವಿತೆ: ಕನ್ನಡಕ

– ಸ್ಪೂರ‍್ತಿ. ಎಂ.

spectacles, glasses, ಕನ್ನಡಕ

ಮನವು ಹಾರುತಿತ್ತು ಅಂದು
ಕನ್ನಡಕವು ಹೊಸತು ಎಂದು
ಎಲ್ಲ ವಸ್ತು ಹೊಳೆವುದೆಂದು
ಆಹಾ! ಎಂತ ಚಂದವೆಂದು

ನೆಲವು ಕಾಣುತಿತ್ತು ಅಂದು
ಮೇಲೆ ಎದ್ದು ಎದ್ದು
ಮನವು ಹೆದರುತಿತ್ತು ಅಂದು
ಎಲ್ಲಿ ಮುಗ್ಗರಿಸುವೇನೋ ಎಂದು

ಮನವು ಹಿರಿ ಹಿರಿ ಹಿಗ್ಗಿತಂದು
ಕಣ್ಣಿಗೆ ಮಿತ್ರನೊಬ್ಬ ದೊರೆತನೆಂದು
ಕಂಡು ಹಿಡಿದವನೊಬ್ಬ ದೇವನೆಂದು
ಮನ ಹೇಳಿತವನಿಗೆ ದನ್ಯವಾದವೆಂದು

ಕನ್ನಡಕವು ಆಗಾಗ ಜಾರುವುದೆಂದು
ಸಿಟ್ಟಾಯಿತು ಮನವು ಅದರ ಮೇಲಿಂದು
ಕಡೆಗೆ ಮನವು ಹೇಳಿದ ಮಾತೊಂದು
ಅಯ್ಯೋ ನನಗೆ ಕನ್ನಡಕವು ಶಾಶ್ವತವಾಯಿತೆಂದು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: