ಆಂದ್ರ ಸ್ಟೈಲ್ ಬದನೆಕಾಯಿ ಪಲ್ಯ

– ಸವಿತಾ.

Andhra Style Brinjal Curry, Eggplant, ಆಂದ್ರ ಸ್ಟೈಲ್ ಬದನೆಕಾಯಿ ಪಲ್ಯ

ಬೇಕಾಗುವ ಸಾಮಾನುಗಳು

  • ಬದನೆಕಾಯಿ – 6-7(ಚಿಕ್ಕ ಗಾತ್ರದ್ದು)
  • ಜೀರಿಗೆ – 1 ಚಮಚ
  • ಸಾಸಿವೆ – 1 ಚಮಚ
  • ಕೊತ್ತಂಬರಿ ಕಾಳು – 1/2 ಚಮಚ
  • ಹೆಸರು ಬೇಳೆ – 1/2 ಚಮಚ
  • ಗಸಗಸೆ – 1/2 ಚಮಚ
  • ಎಳ್ಳು – 1/2 ಚಮಚ
  • ಮೆಂತೆ ಕಾಳು – 1/2 ಚಮಚ
  • ಕಡಲೇ ಬೀಜ – 3 ಚಮಚ
  • ದಾಲ್ಚಿನ್ನಿ – 1/4 ಇಂಚು
  • ಲವಂಗ – 2
  • ಏಲಕ್ಕಿ – 1
  • ಈರುಳ್ಳಿ – 2
  • ಬೆಳ್ಳುಳ್ಳಿ ಎಸಳು – 7-8
  • ಕೊಬ್ಬರಿ ತುರಿ – 1/4 ಬಟ್ಟಲು
  • ಹುಣಸೆ ರಸ – 2 ಚಮಚ
  • ಮೊಸರು – 2 ಚಮಚ
  • ಒಣ ಕಾರದ ಪುಡಿ – 2-3 ಚಮಚ
  • ಬೆಲ್ಲ – 2 ಚಮಚ
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಕರಿಬೇವು – ಸ್ವಲ್ಪ
  • ಎಣ್ಣೆ – 4 ಚಮಚ
  • ಉಪ್ಪು – ರುಚಿಗೆ ತಕ್ಕಶ್ಟು
  • ಸ್ವಲ್ಪ ಅರಿಶಿಣ ಮತ್ತು ಸ್ವಲ್ಪ ಇಂಗು

ಮಾಡುವ ಬಗೆ

ಬದನೆಕಾಯಿ ಪ್ಲಸ್ (+) ಮಾರ‍್ಕ್ ನಲ್ಲಿ ಕತ್ತರಿಸಿ ಇಟ್ಟುಕೊಳ್ಳಿ. ತುಂಬು ಬೇಕಾದರೆ ತೆಗೆಯಿರಿ ಅತವಾ ಎಲೆ ಮುಳ್ಳು ಹರಿದು ತುಂಬು ಮಾತ್ರ ಇಟ್ಟುಕೊಳ್ಳಿ. ಕತ್ತರಿಸಿದ ಬದನೆಕಾಯಿ ತಣ್ಣೀರಿನಲ್ಲಿ ಮುಳುಗಿಸಿ ಇಟ್ಟಿರಿ. ಮೊದಲು ಒಣ ಮಸಾಲೆ ಹುರಿದು ತೆಗೆದಿಡಿ. ಕಡಲೆಬೀಜ, ಹೆಸರು ಬೇಳೆ ಹುರಿದು ತೆಗೆದಿಡಿ. ನಂತರ ಜೀರಿಗೆ, ಕೊತ್ತಂಬರಿ ಕಾಳು, ಮೇಂತೆ ಕಾಳು, ಎಳ್ಳು , ಗಸಗಸೆ , ದಾಲ್ಚಿನ್ನಿ ಏಲಕ್ಕಿ ಲವಂಗ ಎಲ್ಲ ಹುರಿದು ತೆಗೆದಿಟ್ಟುಕೊಳ್ಳಿ. ಬೆಳ್ಳುಳ್ಳಿ ಎಸಳು ಬಿಡಿಸಿ ಇಟ್ಟುಕೊಳ್ಳಿ. ಒಂದು ಈರುಳ್ಳಿ ಕತ್ತರಿಸಿ ಹುರಿಯಿರಿ, ಬೆಳ್ಳುಳ್ಳಿ ಎಸಳು ಸೇರಿಸಿ ಹುರಿದು ತೆಗೆದಿಡಿ. ಹುರಿದ ಪದಾರ‍್ತಕ್ಕೆ ಹಸಿ ಕೊಬ್ಬರಿ ತುರಿ ಸೇರಿಸಿ ಮಿಕ್ಸರ್ ನಲ್ಲಿ ಸ್ವಲ್ಪ ರುಬ್ಬಿ ಇಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ಉಪ್ಪು, ಅರಿಶಿಣ ಮತ್ತು ಒಣ ಕಾರದ ಪುಡಿ ಸ್ವಲ್ಪ ಸೇರಿಸಿ ಚೆನ್ನಾಗಿ ಕಲಸಿ, ಕತ್ತರಿಸಿದ ಬದನೆಕಾಯಿಗೆ ತುಂಬಿ ಇಟ್ಟುಕೊಳ್ಳಿ.

ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಸ್ವಲ್ಪ ಸಾಸಿವೆ ಜೀರಿಗೆ ಕರಿಬೇವು ಇಂಗು ಹಾಕಿ ಕೈಯಾಡಿಸಿ. ಒಂದು ಕತ್ತರಿಸಿದ ಈರುಳ್ಳಿ ಹಾಕಿ. ತುಂಬಿದ ಬದನೆಕಾಯಿ ಇಟ್ಟು ಚೆನ್ನಾಗಿ ಸಣ್ಣ ಉರಿಯಲ್ಲಿ ಹುರಿಯಿರಿ. ಉಪ್ಪು ಅರಿಶಿಣ ಹಾಕಿ ಮುಚ್ಚಳ ಮುಚ್ಚಿ ಮೂರು ನಿಮಿಶ ಬಿಡಬೇಕು. ಆಗ ಬದನೆಕಾಯಿ ಚೆನ್ನಾಗಿ ಬೇಯುತ್ತದೆ. ನಂತರ ಉಳಿದ ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ಹುರಿಯಿರಿ. ಒಂದು ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ. ಮೊಸರು ಹಾಕಿ ತಿರುಗಿಸಿ. ಹುಣಸೆ ರಸ ಸೇರಿಸಿ, ಬೆಲ್ಲ ಹಾಕಿ, ಉಪ್ಪು, ಅರಿಶಿಣ ಕಾರದ ಪುಡಿ ಇನ್ನೊಮ್ಮೆ ನೋಡಿ ಹಾಕಿ ಒಂದು ಕುದಿ ಕುದಿಸಿ ಇಳಿಸಿ. ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಮೇಲೆ ಹಾಕಿ. ಈಗ ರುಚಿ ರುಚಿಯಾದ ಆಂದ್ರ ಸ್ಟೈಲ್ ಬದನೆಕಾಯಿ ಎಣಗಾಯಿ ಸವಿಯಲು ಸಿದ್ದ. ಅನ್ನ ಇಲ್ಲವೇ ಚಪಾತಿ ಜೊತೆ ಸವಿಯಿರಿ .

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: