ಕಡಾ ಪ್ರಸಾದ

– ಸವಿತಾ.

kada prasad, ಕಡಾ ಪ್ರಸಾದ

ಕಡಾ ಪ್ರಸಾದವನ್ನು ಪಂಜಾಬ್ ನಲ್ಲಿ ಸಿಕ್ ಜನರು ಗುರುದ್ವಾರ ಮತ್ತು ಮನೆಗಳಲ್ಲಿ ದೇವರ ಪ್ರಸಾದವಾಗಿ ಮಾಡುತ್ತಾರೆ.

ಬೇಕಾಗುವ ಸಾಮಾನುಗಳು

  • ಗೋದಿ ಹಿಟ್ಟು – 1 ಲೋಟ
  • ತುಪ್ಪ – 1 ಲೋಟ
  • ನೀರು – 1 ಲೋಟ
  • ಸಕ್ಕರೆ – 1

ಮಾಡುವ ಬಗೆ

ಒಲೆ ಹಚ್ಚಿ ಸಣ್ಣ ಉರಿಯಲ್ಲಿ ಇಟ್ಟು, ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ಗೋದಿ ಹಿಟ್ಟು ಹಾಕಿ ಚೆನ್ನಾಗಿ ಹುರಿಯಿರಿ. ಸಕ್ಕರೆಮತ್ತು ನೀರುಸೇರಿಸಿ ಒಂದು ಕುದಿ ಕುದಿಸಿ ಇಳಿಸಿ.

ಚೆನ್ನಾಗಿ ಕಲಸಿದರೆ ಬೇಗ ಮುದ್ದೆಯಾಗಿ ಬರುತ್ತದೆ.ಬಿಸಿ ಬಿಸಿಯಾದ ಕಡಾ ಪ್ರಸಾದ ಈಗ ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: