ಕವಿತೆ: ಸುಳಿವು ನೀಡಬಾರದೆ

– ಶಂಕರ್ ಲಿಂಗೇಶ್ ತೊಗಲೇರ್.

ಕೇಳ್ವಿ, ಸುಳಿವು, ಪ್ರಶ್ನೆ, question, hint

ಸುಳಿವು ನೀಡಬಾರದೆ
ಮುಗಿಲೆಡೆಗೆ ಮುಕ ಮಾಡಿದ
ರೈತನಿಗೆ ಮುಂಗಾರುಮಳೆಯ
ಕಡಲೊಳಗೆ ಬಲೆ ಬೀಸಿದ
ಬೆಸ್ತನಿಗೆ ಮೀನಿನಾ ಸೆಲೆಯ
ಸುಳಿವು ನೀಡಬಾರದೆ?

ಸುಳಿವು ನೀಡಬಾರದೆ
ಕಾಡು ಹುಲ್ಲು ಮೇಯುತಿರುವ
ಸಾರಂಗಕ್ಕೆ ಹೊಂಚು ಹಾಕಿದ ಹುಲಿಯ
ಮ್ರುದು ಮಾತು ಆಡುತಾ
ಹಲ್ಲು ಮಸೆಯುವ ಹಿತೈಶಿಯ
ಸುಳಿವು ನೀಡಬಾರದೆ?

ಸುಳಿವು ನೀಡಬಾರದೆ
ಮುಂಜಾನೆ ಕೊಯ್ದ
ಹೂವೊಂದಕೆ ಸೇರುವ ಮುಡಿಯ
ಗೆಳತಿಯೊಡನೆ ಪತ್ರ ರವಾನಿಸಿದ
ಪ್ರೇಮಿಗೆ ಪ್ರೇಮ ಸಮ್ಮತಿಯ
ಸುಳಿವು ನೀಡಬಾರದೆ?

ಸುಳಿವು ನೀಡಬಾರದೆ
ಓದು ತಲೆಗತ್ತದವನ ತಂದೆಗೆ
ಮಗನ ಹುದುಗಿಟ್ಟ ಕಲೆಯ
ಓದು ಕೈಬಿಟ್ಟವನ ಮಗನಿಗೆ
ತನ್ನಪ್ಪನ ಸಣ್ಣ ಆಶಯದ
ಸುಳಿವು ನೀಡಬಾರದೆ?

(ಚಿತ್ರ ಸೆಲೆ: freegreatpicture.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: