ಕವಿತೆ: ಒಲುಮೆಗೆ ಅನುಬಂದವೆ ಶೋಬೆ

– ವಿನು ರವಿ.

ಚಿಟ್ಟೆ, Butterfly

ಹಗಲಿಗೆ ಸೂರ‍್ಯನೇ ಶೋಬೆ
ಸೂರ‍್ಯನಿಗೆ ಕಿರಣವೇ ಶೋಬೆ
ಇರುಳಿಗೆ ಚಂದ್ರನೇ ಶೋಬೆ
ಚಂದ್ರನಿಗೆ ಬೆಳದಿಂಗಳೇ ಶೋಬೆ

ಬಳ್ಳಿಗೆ ಹೂವೇ ಶೋಬೆ
ಹೂವಿಗೆ ಪರಿಮಳವೇ ಶೋಬೆ
ಸಾಗರಕೆ ಅಲೆಗಳೇ ಶೋಬೆ
ಅಲೆಗಳಿಗೆ ಏರಿಳಿತವೇ ಶೋಬೆ

ಗಿರಿಗಳಿಗೆ ಮೋಡಗಳೇ ಶೋಬೆ
ಮೋಡಗಳಿಗೆ ಮಳೆಯೇ ಶೋಬೆ
ಬಾನಿಗೆ ನೀಲವರ‍್ಣವೇ ಶೋಬೆ
ನೀಲವರ‍್ಣಕ್ಕೆ ವರ‍್ಣಮೇಳವೇ ಶೋಬೆ

ಬಾಲ್ಯಕ್ಕೆ ಮುಗ್ದತೆಯೇ ಶೋಬೆ
ಮುಗ್ದತೆಗೆ ಕನಸುಗಳೇ ಶೋಬೆ
ಯೌವನಕೆ ಪ್ರೀತಿಯೇ ಶೋಬೆ
ಪ್ರೀತಿಗೆ ಲಜ್ಜೆಯೇ ಶೋಬೆ

ಹಿರಿತನಕೆ ಅನುಬವವೆ ಶೋಬೆ
ಅನುಬವಕೆ ಅರಿವೇ ಶೋಬೆ
ಬಾಳಿಗೆ ಒಲುಮೆಯೇ ಶೋಬೆ
ಒಲುಮೆಗೆ ಅನುಬಂದವೇ ಶೋಬೆ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: