ಕವಿತೆ: ಕಾಣದ ಕಡಲ ತೀರ

– ಶಶಾಂಕ್.ಹೆಚ್.ಎಸ್.

ಕನಸ ಕನ್ನಡಿಗೆ ಆವರಿಸಿದೆ
ಕಾರ‍್ಮೋಡದ ಕರಿ ಚಾಯೆ
ಆ ಚಾಯೆಯ ತೆಗೆಯುವವರಿಲ್ಲ
ತೆಗೆದು ಮುನ್ನಡೆಸುವವರಿಲ್ಲ, ಆದರೂ
ಬದುಕಿನ ಯಾನ ಮುನ್ನಡೆದಿದೆ
ಕಾಣದ ಕಡಲ ತೀರವ ಬಯಸಿ

ಗೋರ ಬಿರುಗಾಳಿಯೊಂದು
ಬಂದು ಅಪ್ಪಳಿಸಿ
ಹರಿದು ಹೋಗಿದೆ ಬದುಕು
ಹರಿದಾ ಬದುಕ ಹೊಲೆಯುವ
ಕಲೆಯ ನಾ ತಿಳಿಯನಾದೆ
ತಿಳಿದರೂ ಹೊಲೆಯನಾದೆ

ಒಡೆದ ಕಟ್ಟಿಗೆಯಾಗಿಹುದು ಮನಸ್ಸು
ಆ ಮನಸ್ಸ ಗೋರ ಆಕ್ರಂದನಕ್ಕೆ
ಕಂಬನಿಯ ಕಟ್ಟೆ ಒಡೆದು ಹರಿಯುತಿಹುದು
ಬೋರ‍್ಗರೆವ ಅಲೆಯ ರಬಸದ ಹಾಗೆ

(ಚಿತ್ರ ಸೆಲೆ: unsplash.com)

2 ಅನಿಸಿಕೆಗಳು

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: