ಬಾಳೆಹಣ್ಣಿನ ಹಲ್ವಾ

– ಸವಿತಾ.

ಬೇಕಾಗುವ ಸಾಮಾನುಗಳು

  • ಬಾಳೆಹಣ್ಣು – 2
  • ಒಣ ಕೊಬ್ಬರಿ ತುರಿ – 1 ಬಟ್ಟಲು
  • ಬೆಲ್ಲ – 3/4 ಬಟ್ಟಲು
  • ಏಲಕ್ಕಿ – 2
  • ತುಪ್ಪ – 4 ಚಮಚ

ಮಾಡುವ ಬಗೆ

ಎರಡು ಬಾಳೆಹಣ್ಣು ಸಿಪ್ಪೆ ಸುಲಿದು ಸಣ್ಣಗೆ ಕತ್ತರಿಸಿ. ಒಂದು ಬಾಣಲೆ ಒಲೆಯ ಮೇಲಿಟ್ಟು, ತುಪ್ಪ ಹಾಕಿ, ಕತ್ತರಿಸಿದ ಬಾಳೆಹಣ್ಣು ಹುರಿಯಿರಿ. ಬೆಲ್ಲ ಪುಡಿ ಮಾಡಿ ಸೇರಿಸಿ ಕಲಸಿ. ಬೆಲ್ಲ ಕರಗುತ್ತದೆ. ಒಣ ಕೊಬ್ಬರಿ ತುರಿ ಸೇರಿಸಿ ಹತ್ತು ನಿಮಿಶ ಕುದಿಸಿ. ಗಟ್ಟಿ ಆದ ಹಾಗೇ ಒಲೆ ಆರಿಸಿ. ಏಲಕ್ಕಿ ಪುಡಿ ಮಾಡಿ ಹಾಕಿ ಇನ್ನೊಮ್ಮೆ ಚೆನ್ನಾಗಿ ತಿರುಗಿಸಿ.

ಒಂದು ತಟ್ಟೆಗೆ ತುಪ್ಪ ಸವರಿ ಈ ಮಿಶ್ರಣ ಹಾಕಿ ಕೈಯಿಂದ ಅತವಾ ಚಮಚದಿಂದ ಅಗಲ ಮಾಡಿ, ಚಾಕುವಿನಿಂದ ಚೌಕ ಆಕಾರದಲ್ಲಿ ಕತ್ತರಿಸಿ. ಈಗ ಬಾಳೆಹಣ್ಣಿನ ಹಲ್ವಾ ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: