ದಾಳಿಂಬೆ ಹಣ್ಣಿನ ಗೊಜ್ಜು

– ಸವಿತಾ.

pomegranate, ದಾಳಿಂಬೆ, ಗೊಜ್ಜು, gojju

ಬೇಕಾಗುವ ಸಾಮಾನುಗಳು

  • ದಾಳಿಂಬೆ ಬೀಜ – 1 ಬಟ್ಟಲು
  • ಹಸಿ ಮೆಣಸಿನಕಾಯಿ – 1-2
  • ಟೊಮೋಟೊ – 1
  • ಒಣ ಮೆಣಸಿನಕಾಯಿ – 1
  • ಸಾಸಿವೆ – 1/2 ಚಮಚ
  • ಜೀರಿಗೆ – 1/2 ಚಮಚ
  • ಕರಿಬೇವು – 7-8 ಎಲೆ
  • ಇಂಗು – 1/4 ಚಮಚ
  • ಹುಣಸೆ ರಸ – 2 ಚಮಚ
  • ಅರಿಶಿಣ – 1/4 ಚಮಚ
  • ಬೆಲ್ಲ – 1-2 ಚಮಚ
  • ಎಣ್ಣೆ – 1 ಚಮಚ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ದಾಳಿಂಬೆ ಬೀಜ ಬಿಡಿಸಿ ಇಟ್ಟುಕೊಳ್ಳಿ. ಟೊಮೋಟೊ ನೀರಿನಲ್ಲಿ ಒಂದು ಕುದಿ ಕುದಿಸಿ. ಆರಿದ ನಂತರ ಹಸಿ ಮೆಣಸಿನಕಾಯಿ ಸೇರಿಸಿ ಮಿಕ್ಸರ್ ನಲ್ಲಿ,ತರಿ ತರಿಯಾಗಿ ರುಬ್ಬಿ ಇಟ್ಟುಕೊಳ್ಳಿ. ಸ್ವಲ್ಪ ಉಪ್ಪು ಬೆಲ್ಲ ಸೇರಿಸಿ ಇಡಿ.

ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಕರಿಬೇವು, ಒಣ ಮೆಣಸಿನಕಾಯಿ ಮುರಿದು ಹಾಕಿ, ಸ್ವಲ್ಪ ಇಂಗು, ಅರಿಶಿಣ ಹಾಕಿ ಹುರಿಯಿರಿ. ರುಬ್ಬಿದ ಮಿಶ್ರಣವನ್ನು ಸೇರಿಸಿ, ಸ್ವಲ್ಪ ಹುಣಸೆ ರಸ ಸೇರಿಸಿ ಒಂದು ಕುದಿ ಕುದಿಸಿ ಇಳಿಸಿ.

ಈಗ ದಾಳಿಂಬೆ ಗೊಜ್ಜು ಸವಿಯಲು ಸಿದ್ದ, ಅನ್ನದ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: