ಕವಿತೆ: ಎಲ್ಲಿರುವೆ ಮಳೆ

– ಶ್ಯಾಮಲಶ್ರೀ.ಕೆ.ಎಸ್.

ರೈತ, Farmer

ಎಲ್ಲಿರುವೆ ಮಳೆ
ಕಾಯುತಿಹಳು ಇಳೆ
ಸೊರಗಿಹವು ಬೆಳೆ
ಬಂದು ತೊಳೆದು ಬಿಡು ಕೊಳೆ

ಮಳೆ ನೀ ಬಂದಾಗ
ಆಗುವುದು ಸೋಜಿಗ
ಮೀಯುವುದು ಬೂಬಾಗ
ರೈತನಿಗೆ ಸೊಗ

ಒಮ್ಮೊಮ್ಮೆ ಅಬ್ಬರಿಸಿಬಿಡುವೆ
ಪ್ರವಾಹವ ಹರಿಸಿಬಿಡುವೆ
ಜೀವಗಳ ನುಂಗಿಬಿಡುವೆ
ಪ್ರಳಯವ ಸಮೀಪಿಸಿ ಬಿಡುವೆ

ಅರಿಯದಾಗಿದೆ ನಿನ್ನ ಹುನ್ನಾರವ
ನೋಯಿಸದಿರು ನಿಸರ‍್ಗವ
ತಂಪಾಗಿಸು ಬೂಲೋಕವ
ಸರಿದೂಗಿಸು ನಿನ್ನಾಟವ

(ಚಿತ್ರ ಸೆಲೆ : newsgram.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: