ಅನಾನಸ್ ಹಣ್ಣಿನ ಕೂರ‍್ಮ

– ಸವಿತಾ.

ananas koorma, ಅನಾನಸ್ ಹಣ್ಣಿನ ಕೂರ‍್ಮ, pineapple

ಬೇಕಾಗುವ ಸಾಮಾನುಗಳು

 • ಅನಾನಸ್ ಹಣ್ಣಿನ ಹೋಳುಗಳು – 1 ಬಟ್ಟಲು
 • ಈರುಳ್ಳಿ – 1
 • ಹಸಿ ಕೊಬ್ಬರಿ ತುರಿ – 1/4 ಬಟ್ಟಲು
 • ಹಸಿ ಶುಂಟಿ – 1/4 ಇಂಚು
 • ಬೆಳ್ಳುಳ್ಳಿ ಎಸಳು – 4
 • ಬೆಲ್ಲ – 1 ಚಮಚ
 • ಒಣ ಮೆಣಸಿನಕಾಯಿ – 2
 • ಹಸಿ ಮೆಣಸಿನಕಾಯಿ – 1
 • ಸಾಸಿವೆ – 1/2 ಚಮಚ
 • ಕರಿಬೇವು – 8 ಎಲೆ
 • ಎಣ್ಣೆ – 2 ಚಮಚ
 • ಅರಿಶಿಣ ಪುಡಿ – ಸ್ವಲ್ಪ
 • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಅನಾನಸ್ ಹಣ್ಣಿನ ಹೋಳುಗಳನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ. ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಕತ್ತರಿಸಿ ಇಟ್ಟುಕೊಳ್ಳಿ. ಬೆಳ್ಳುಳ್ಳಿ ಎಸಳು ಹಸಿ ಶುಂಟಿ ಜಜ್ಜಿ ಇಟ್ಟುಕೊಳ್ಳಿ.

ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ ಸಿಡಿಸಿ, ಕರಿಬೇವು ಎಲೆ ಸೇರಿಸಿ ಕೈಯಾಡಿಸಿ. ಕತ್ತರಿಸಿದ ಹಸಿ ಮೆಣಸಿನಕಾಯಿ ಸೇರಿಸಿ, ಒಣ ಮೆಣಸಿನಕಾಯಿ ಮುರಿದು ಹಾಕಿ. ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಕತ್ತರಿಸಿ ಇಟ್ಟ ಅನಾನಸ್ ಹಣ್ಣಿನ ಹೋಳು ಹಾಕಿ ಚೆನ್ನಾಗಿ ಹುರಿಯಿರಿ. ರುಚಿಗೆ ತಕ್ಕಶ್ಟು ಉಪ್ಪು, ಅರಿಶಿಣ ಪುಡಿ ಮತ್ತು ಬೆಲ್ಲ ಹಾಕಿ. ತೆಂಗಿನ ಕಾಯಿ ತುರಿಗೆ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಸೇರಿಸಿ. ಸ್ವಲ್ಪ ನೀರು ಹಾಕಿ ಒಂದು ಕುದಿ ಕುದಿಸಿ.

ಈಗ ಅನಾನಸ್ ಹಣ್ಣಿನ ಕೂರ‍್ಮ ಸವಿಯಲು ಸಿದ್ದ. ಅನ್ನದ ಜೊತೆ ಕಲೆಸಿಕೊಂಡು ಸವಿಯಿರಿ. ಪೂರಿ, ದೋಸೆ ಇಲ್ಲವೇ ಚಪಾತಿ ಜೊತೆ ಸಹ ಸವಿಯಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: