ಅನಾನಸ್ ಅವಲಕ್ಕಿ ಶಿರಾ

– ಸವಿತಾ.

ಅನಾನಸ್ ಅವಲಕ್ಕಿ ಶಿರಾ

ಬೇಕಾಗುವ ಪದಾರ‍್ತಗಳು

  • 1 ಬಟ್ಟಲು ಅವಲಕ್ಕಿ
  • 1 ಬಟ್ಟಲು ಅನಾನಸ್ ಹಣ್ಣಿನ ಹೋಳು
  • 1 ಬಟ್ಟಲು ನೀರು
  • 3/4 ಬಟ್ಟಲು ಬೆಲ್ಲದ ಪುಡಿ ಅತವಾ ಸಕ್ಕರೆ
  • 1/4 ಬಟ್ಟಲು ಒಣ ಕೊಬ್ಬರಿ ತುರಿ
  • 10 ಒಣ ದ್ರಾಕ್ಶಿ
  • 6-7 ಗೋಡಂಬಿ
  • 4 ಚಮಚ ತುಪ್ಪ
  • 2 ಏಲಕ್ಕಿ
  • 1/2 ಇಂಚು ದಾಲ್ಚಿನ್ನಿ

ಮಾಡುವ ಬಗೆ

ಅವಲಕ್ಕಿ ನೀರಿನಲ್ಲಿ ತೊಳೆದು ಇಟ್ಟುಕೊಳ್ಳಿ. ಅನಾನಸ್ ಹೋಳುಗಳನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ. ಒಣ ಕೊಬ್ಬರಿ ತುರಿದು ಇಟ್ಟುಕೊಳ್ಳಿ.

ಒಂದು ಬಾಣಲೆ ಒಲೆಯ ಮೇಲಿಟ್ಟು ಎರಡು ಚಮಚ ತುಪ್ಪ ಹಾಕಿ ಗೋಡಂಬಿ ಒಣ ದ್ರಾಕ್ಶಿ ಸ್ವಲ್ಪ ಹುರಿದು ತೆಗೆದಿಡಿ. ಮತ್ತೇ ತುಪ್ಪ ಹಾಕಿ ನಂತರ ನೆನೆಸಿದ ಅವಲಕ್ಕಿ, ಅನಾನಸ್ ಹಣ್ಣಿನ ಹೋಳು ಹಾಕಿ ಸ್ವಲ್ಪ ಹುರಿಯಿರಿ. ನೀರು ಸೇರಿಸಿ ಒಂದು ಕುದಿ ಬಂದಾಗ ಬೆಲ್ಲ ಅತವಾ ಸಕ್ಕರೆ ಸೇರಿಸಿ ಚೆನ್ನಾಗಿ ಕೈಯಾಡಿಸಿ. ಒಣ ಕೊಬ್ಬರಿ ತುರಿ ಸೇರಿಸಿ ಸ್ವಲ್ಪ ಕುದಿಸಿ. ನೀರು ನೋಡಿ, ಬೇಕು ಎನಿಸಿದರೆ ಮಾತ್ರ ಸೇರಿಸಿ. ತುಪ್ಪದಲ್ಲಿ ಹುರಿದ ಗೋಡಂಬಿ, ಒಣ ದ್ರಾಕ್ಶಿ ಹಾಕಿ ಚೆನ್ನಾಗಿ ತಿರುಗಿಸಿ. ಏಲಕ್ಕಿ, ದಾಲ್ಚಿನ್ನಿ ಅತವಾ ಚಕ್ಕೆ ಪುಡಿ ಮಾಡಿ ಹಾಕಿ ಇನ್ನೊಮ್ಮೆ ಚೆನ್ನಾಗಿ ತಿರುಗಿಸಿ. ಈಗ ಅನಾನಸ್ ಅವಲಕ್ಕಿ ಶಿರಾ ಅತವಾ ಕೇಸರಿ ಬಾತ್ ಸವಿಯಲು ಸಿದ್ದ. ಪ್ರಸಾದಕ್ಕಾಗಿಯೂ ಇದನ್ನು ಮಾಡಬಹುದು.

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: