ಕವಿತೆ: ಹಣದ ಅಮಲು

– ಶ್ಯಾಮಲಶ್ರೀ.ಕೆ.ಎಸ್.

money, ದುಡ್ಡು

ಆಸೆ ಕೈ ಬೀಸಿತೆಂದು
ಜಗವು ಕಾಸಿನ ಬೆನ್ನೇರಿದೆ
ಹಣದ ಅಮಲು ಅತಿಯಾಗಿದೆ

ದನದ ನಶೆ ಏರಿತೆಂದು
ಮನವು ಮರ‍್ಕಟವಾಗಿದೆ
ಅಹಂ ಆರ‍್ಬಟಿಸಿದೆ

ರೊಕ್ಕದ ರುಚಿ ಮೀರಿತೆಂದು
ನಡೆಯು ರಕ್ಕಸವಾಗಿದೆ
ಬಡವನ ಹಸಿವು ಕಾಣದಾಗಿದೆ

ಕಾಂಚಾಣವು ಕುಣಿಯತಲಿದ್ದು
ಕಡಿವಾಣ ಕಳಚಿದೆ
ಕಾರುಣ್ಯ ಇಲ್ಲದಾಗಿದೆ

ದುಡ್ಡು ದರ‍್ಪ ಮಾಡುತಲಿದ್ದು
ದುಶ್ಚಟ ತಾಂಡವವಾಡಿದೆ
ವ್ಯಾದಿ ಮಡುಗಟ್ಟಿದೆ

(ಚಿತ್ರ ಸೆಲೆ: needpix.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: