ಕವಿತೆ : ಎಲ್ಲೆ

– ವಿನು ರವಿ.

ಬದುಕು, life

ಬೆಳಕಿನ ಎಲ್ಲೆಯನು
ವಿಸ್ತರಿಸುವುದೆ ಕತ್ತಲು
ಗಾಳಿಯ ಎಲ್ಲೆಯನು
ವಿಸ್ತರಿಸುವುದೆ ಬಯಲು

ಮಳೆಯ ಎಲ್ಲೆಯನು
ವಿಸ್ತರಿಸುವುದೆ ಕಾಡು
ಗೆಲುವಿನ ಎಲ್ಲೆಯನು
ವಿಸ್ತರಿಸುವುದೆ ಸೋಲು

ಗಗನದ ಎಲ್ಲೆಯನು
ವಿಸ್ತರಿಸುವುದೆ ಕಲ್ಪನೆ
ಮನಸಿನ ಎಲ್ಲೆಯನು
ವಿಸ್ತರಿಸುವುದೆ ಚಿಂತನೆ

ಬಯಕೆಗಳ ಎಲ್ಲೆಯನು
ವಿಸ್ತರಿಸುವುದೆ ಬಾವನೆ
ಬದುಕಿನ ಎಲ್ಲೆಯನು
ವಿಸ್ತರಿಸುವುದೆ ಕಾಮನೆ

(ಚಿತ್ರ ಸೆಲೆ:  wiki)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Prashantha T says:

    amazing

ಅನಿಸಿಕೆ ಬರೆಯಿರಿ: