ಸಿಹಿ ಪ್ರಿಯರಿಗೆ : ಪೂರಿ ಲಾಡು

ಸವಿತಾ.

ಪೂರಿ ಲಾಡು

ಬೇಕಾಗುವ ಪದಾರ‍್ತಗಳು

  • ಬೆಲ್ಲ – 1 ಬಟ್ಟಲು
  • ಗೋದಿ ಹಿಟ್ಟು – 1/2 ಬಟ್ಟಲು
  • ಮೈದಾ ಹಿಟ್ಟು – 1/2 ಬಟ್ಟಲು (ಬೇಕಾದರೆ ಪೂರ‍್ತಿ ಗೋದಿ ಹಿಟ್ಟು ಬಳಸಬಹುದು)
  • ಒಣ ಕೊಬ್ಬರಿ ತುರಿ – 1/2 ಬಟ್ಟಲು
  • ಏಲಕ್ಕಿ – 2
  • ಲವಂಗ – 2
  • ಚಕ್ಕೆ – 1/2 ಇಂಚು (ಬೇಕಿದ್ದಲ್ಲಿ ಮಾತ್ರ ಸೇರಿಸಿ)
  • ಒಣ ಶುಂಟಿ ಪುಡಿ – 1/2 ಚಮಚ (ಬೇಕಾದರೆ ಮಾತ್ರ ಸೇರಿಸಿ)
  • ಕಾದ ಎಣ್ಣೆ – 2 ಚಮಚ
  • ಕರಿಯಲು ಎಣ್ಣೆ

ಮಾಡುವ ಬಗೆ

ಗೋದಿ ಹಿಟ್ಟು ಮತ್ತು ಮೈದಾ ಹಿಟ್ಟು, ಕಾದ ಎಣ್ಣೆ, ಸ್ವಲ್ಪ ನೀರು ಸೇರಿಸಿ ಪೂರಿ ಮಾಡಲು ಹಿಟ್ಟು ಕಲಸಿ ಇಟ್ಟುಕೊಳ್ಳಿ. ಅರ‍್ದ ಗಂಟೆ ಬಿಟ್ಟು ಪೂರಿ ಲಟ್ಟಿಸಿ ಕಾದ ಎಣ್ಣೆಗೆ ಹಾಕಿ ಸ್ವಲ್ಪ ಕೆಂಬಣ್ಣ ಬರುವವರೆಗೆ ಕರಿದು ತೆಗೆಯಿರಿ. ಒಂದು ಬಿಳಿಯ ಬಣ್ಣದ ಬಟ್ಟೆ ಮೇಲೆ ಹರಡಿ ಸ್ವಲ್ಪ ಆರಲು ಬಿಡಿ. ನಂತರ ಪೂರಿ ಮುರಿದು ಮಿಕ್ಸರ‍್ ನಲ್ಲಿ ಪುಡಿ ಮಾಡಿ.

ಬೆಲ್ಲದ ಪುಡಿ ಮತ್ತು ನಾಲ್ಕು ಚಮಚ ನೀರು ಸೇರಿಸಿ ಒಂದು ಎಳೆ ಪಾಕ ಮಾಡಿ. ಬೆಲ್ಲದ ಪಾಕ, ಒಣ ಕೊಬ್ಬರಿ ತುರಿ, ಪೂರಿ ಪುಡಿ ಎಲ್ಲಾ ಒಂದು ಪಾತ್ರೆಯಲ್ಲಿ ಸೇರಿಸಿಕೊಳ್ಳಿ. ಏಲಕ್ಕಿ, ಲವಂಗ, ಚಕ್ಕೆ, ಒಣ ಶುಂಟಿ ಕುಟ್ಟಿ ಪುಡಿ ಮಾಡಿ ಇದಕ್ಕೆ ಸೇರಿಸಿ ಚೆನ್ನಾಗಿ ಕೈಯಾಡಿಸಿ ಒಂದೊಂದೇ ಉಂಡೆ ಕಟ್ಟಿ ಇಟ್ಟುಕೊಳ್ಳಿ. (ನಿಮಗೆ ಗೋಡಂಬಿ ಒಣ ದ್ರಾಕ್ಶಿ ಬೇಕು ಅನಿಸಿದರೆ ಸ್ವಲ್ಪ ತುಪ್ಪದಲ್ಲಿ ಹುರಿದು ಹಾಕಿ ಸೇರಿಸಿಕೊಳ್ಳಿ). ಈಗ ಪೂರಿ ಲಾಡು ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: