ಕವಿತೆ: ಮೌನ ಕಾಡಿದೆ

– ವಿನು ರವಿ.

 

ಯಾಕೋ ಏನೋ ಮೌನವೊಂದು
ಬಾವವೊಂದು ಹಾಡಾಗದೆ
ಉಳಿದಂತೆ ನನ್ನ ಮನವ ಕಾಡಿದೆ

ಎದೆಯ ತುಂಬಾ ಹೆಪ್ಪುಗಟ್ಟಿದ
ರಾಗದೊಲುಮೆ ಬಿಡದೆ
ಶ್ರುತಿಯಾ ಮಿಡಿದರೂ
ಕವಿತಯೊಂದು ಕಣ್ಣ ತೆರಯದೆ

ಮಳೆ ಹನಿಯ ಬಿಂದು ಎಲೆಯ
ಮೇಲೆ ಬಿದ್ದು ಜಾರಿ ಹೋದರೂ
ಮತ್ತೆ ಹನಿಯು ಎಲೆಯ ಜೊತೆಯ ಬಯಸದೆ

ಆಗಸದ ಬಯಲು ಹಾರುವ
ಆಸೆಯ ತುಂಬಿದರೂ ಹಕ್ಕಿ
ಮರದ ರೆಂಬೆ ಬಿಡದೆ ಉಳಿದಿದೆ

ಯಾಕೊ ಏನೊ ಮೌನವೊಂದು
ಬಾವವೊಂದು ಹಾಡಾಗದೆ
ಉಳಿದಂತೆ ನನ್ನ ಮನವ ಕಾಡಿದೆ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: