ಕವಿತೆ: ಶಿಕ್ಶಕರ ಕರ‍್ತವ್ಯ

– ವೆಂಕಟೇಶ ಚಾಗಿ.

ಕಲಿಸುಗ, ಗುರು, ಶಿಕ್ಶಕ, Teacher

ವಿದ್ಯೆಯನರಸುತ ಶಾಲೆಗೆ ಬರುವ
ಮುಗ್ದ ಮನಸ್ಸುಗಳ ಓದುವಿರಾ
ಲೋಕದ ಗ್ನಾನವ ಅರ‍್ಜನೆಗೈದು
ಸುಂದರ ಕನಸಿಗೆ ಬೆಲೆ ನೀಡುವಿರಾ

ಮಕ್ಕಳ ದ್ರುಶ್ಟಿಗೆ ಸಮಾನರೆಲ್ಲರೂ
ಬೇಕು ಸಮಾನ ದ್ರುಶ್ಟಿಯ ಶಿಕ್ಶಕರು
ಮಕ್ಕಳ ಹ್ರುದಯದ ಮಿಡಿತವನರುಹಿ
ದ್ರುಡ ಬವಿಶ್ಯವ ಕಟ್ಟುವ ರಕ್ಶಕರು

ಕಲ್ಪನೆಯೊಳಗಿನ ಅಮ್ರುತವನುಣಿಸದೆ
ವಾಸ್ತವ ಬದುಕಿನ ಮೆಟ್ಟಿಲು ಏರಿಸಿರಿ
ಬದುಕಲಿ ಬಣ್ಣದ ಚಿತ್ರವ ಬರೆದು
ಮಿನುಗುವ ಸಿರಿ ತಾರೆಗಳಾಗಿಸಿರಿ

ಕಲಿಕೆಯ ಪರಿಸರ ಬೇದವಗೊಳಿಸದೆ
ಗುಣಿಸಲಿ ಶಿಕ್ಶಣ ಅಗಣಿತ ಜೀವನದಿ
ಶಿಕ್ಶಕನೆಂದರೆ ರಾಶ್ಟ್ರದ ಶಿಲ್ಪಿಯು
ನಿಜದಲಿ ಉಳಿಯಲಿ ಬವಿಶ್ಯದಲಿ

(ಚಿತ್ರ ಸೆಲೆ: scoopwhoop.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks