ಮಸಾಲೆ ವಡೆ (ಚಟ್ಟಂಬಡೆ)

– ಸವಿತಾ.

 

masala vade, ಚಟ್ಟಂಬಡೆ, ಮಸಾಲಾ ವಡೆ

ಬೇಕಾಗುವ ಸಾಮಾನುಗಳು

  • ಕಡಲೇ ಬೇಳೆ – 2 ಲೋಟ
  • ಉದ್ದಿನ ಬೇಳೆ – 1/4 ಲೋಟ
  • ಕರಿಬೇವು ಎಲೆ – 20
  • ಹಸಿ ಶುಂಟಿ 1/4 ಇಂಚು
  • ಹಸಿ ಮೆಣಸಿನಕಾಯಿ – 4
  • ಇಂಗು – 1/4 ಚಮಚ
  • ಈರುಳ್ಳಿ – 2
  • ಉಪ್ಪು ರುಚಿಗೆ ತಕ್ಕಶ್ಟು

ಮಾಡುವ ಬಗೆ

ಕಡಲೇ ಬೇಳೆ ಮತ್ತು ಉದ್ದಿನ ಬೇಳೆ ತೊಳೆದು ನೀರಿನಲ್ಲಿ ನಾಲ್ಕು ಗಂಟೆಗಳ ಕಾಲ ನೆನೆಯಲು ಇಡಬೇಕು. ನಂತರ ನೀರು ಬಸಿದು ತರಿ ತರಿಯಾಗಿ ರುಬ್ಬಿ ಇಟ್ಟುಕೊಳ್ಳಿ. ರುಬ್ಬುವಾಗ ಹಸಿ ಮೆಣಸಿನಕಾಯಿ, ಕರಿಬೇವು, ಹಸಿ ಶುಂಟಿ ಮತ್ತು ಸ್ವಲ್ಪ ಉಪ್ಪು ಸೇರಿಸಿ ರುಬ್ಬಿ. ಆಮೇಲೆ ಇಂಗು ಸೇರಿಸಿ. ಈರುಳ್ಳಿ ಸಣ್ಣಗೆ ಕತ್ತರಿಸಿ ಹಾಕಿ. ಬೇಕಾದರೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.

ಸ್ವಲ್ಪ ಹಿಟ್ಟು ಹಿಡಿದು ಚಪ್ಪಟೆಯಾಗಿ ತಟ್ಟಿ ವಡೆ ತಯಾರಿಸಿ, ಕಾದ ಎಣ್ಣೆ ಯಲ್ಲಿ ಬಿಟ್ಟು ಕರಿಯಿರಿ. ಈಗ ಚಟ್ಟಂಬಡೆ ಅತವಾ ಮಸಾಲಾ ವಡೆ ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: